ಅರಸೀಕೆರೆ(ಹಾಸನ): ಜಿಲ್ಲೆಯಲ್ಲಿ ಇಂದು 31 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಹಾಸನದ ಜನರನ್ನು ಆತಂಕಕ್ಕೀಡುಮಾಡಿದೆ.
ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿನ ಸಲೂನ್ ಶಾಪ್ ಒಂದರ 3 ಮಂದಿಗೆ ಇಂದು ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅಲ್ಲಿ ಎರಡು ಏರಿಯಾಗಳನ್ನು ತಾಲ್ಲೂಕು ಆಡಳಿತ ಸೀಲ್ ಡೌನ್ ಮಾಡಿದೆ.

ಅರಸೀಕೆರೆ ನಗರದ ಶಾನುಭೋಗರ ಬೀದಿ ಹಾಗೂ ಸಂತೆಪೇಟೆ ಮೈದಾನದಲ್ಲಿನ ಕಟಿಂಗ್ ಶಾಪ್ ಗಳಲ್ಲಿ ಕೆಲಸ ಮಾಡುತ್ತಿದ್ದ ಮೂರು ಮಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಈ 2 ಮುಖ್ಯ ರಸ್ತೆಯನ್ನು ತಾಲೂಕಾಡಳಿತ ಹಾಗೂ ನಗರಸಭೆ ವತಿಯಿಂದ ಸಂಪೂರ್ಣ ಸಿಲ್ ಡೌನ್ ಮಾಡಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಈ ಮೂವರನ್ನು 2 ದಿನಗಳ ಹಿಂದೆ ತಾಲೂಕು ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಿತ್ತು. ಇಂದು ಅವರುಗಳ ಪರೀಕ್ಷಾ ವರದಿ ಬಂದಿದ್ದು, ಮೂರು ಮಂದಿಗೆ ಪಾಸಿಟಿವ್ ಇರುವುದು ದೃಢವಾಗಿದೆ. ಈ ಹಿನ್ನೆಲೆ ಅಂಗಡಿ ಸೇರಿದಂತೆ ಅಂಗಡಿಯ ಎರಡು ಬದಿಯ ರಸ್ತೆಗಳನ್ನು ತಹಸೀಲ್ದಾರ್ ಸಂತೋಷ್ ಕುಮಾರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ನಾಗಪ್ಪ ಸೀಲ್ ಡೌನ್ ಮಾಡಿದ್ದಾರೆ.