ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಮತ್ತೆ ಮೂವರಿಗೆ ಕೊರೊನಾ ​: ಸೋಂಕಿತರ ಸಂಖ್ಯೆ 212ಕ್ಕೆ ಏರಿಕೆ - ಹಾಸನ ಲೆಟೆಸ್ಟ್​ ಕೊರೊನಾ ಅಪ್​ಡೇಟ್​

ಹಾಸನದಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 212ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು.

DC. R. Girish
ಜಿಲ್ಲಾಧಿಕಾರಿ ಆರ್‌. ಗಿರೀಶ್‌

By

Published : Jun 9, 2020, 1:51 AM IST

ಹಾಸನ: ಜಿಲ್ಲೆಯಲ್ಲಿ ಬೆಂಗಳೂರಿನಿಂದ ಬಂದಿದ್ದ ಲಾರಿ ಚಾಲಕ ಸೇರಿದಂತೆ ಮಹಾರಾಷ್ಟ್ರದಿಂದ ಮರಳಿದ್ದ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 212ಕ್ಕೆ ಏರಿಕೆಯಾಗಿದೆ.

ಬೆಂಗಳೂರಿಗೆ ಪ್ರಯಾಣ ಮಾಡಿದ ಅರಕಲಗೂಡಿನ 36 ವರ್ಷದ ಪಿ-5479 ಲಾರಿ ಚಾಲಕ, ಮುಂಬೈನಿಂದ ಮರಳಿದ್ದ ಚನ್ನರಾಯಪಟ್ಟಣ ತಾಲೂಕಿನ 23 ವರ್ಷದ ಪಿ-5480 ಮಹಿಳೆ ಹಾಗೂ ಅರಸೀಕೆರೆ ತಾಲೂಕಿನ 58 ವರ್ಷದ ಪಿ-5481 ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು.

ಬೆಂಗಳೂರಿಗೆ ಹೋಗಿ ಬಂದಿದ್ದ ಅರಕಲಗೂಡು ತಾಲೂಕಿನ ಲಾರಿ ಚಾಲಕನಿಗೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಆತನಿಗೆ ಜ್ವರ ಕಾಣಿಸಿಕೊಂಡಿದ್ದು, ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಮವಾರ ವರದಿ ಪಾಸಿಟಿವ್‌ ಬಂದಿದೆ. ಚಾಲಕನು ಲಾರಿ ಸಮೇತ ವಿವಿಧ ಕಡೆ ಓಡಾಡಿದ್ದು, ಆತ ವಾಸವಿದ್ದ ಗ್ರಾಮವನ್ನು ಕಂಟೈನ್‌ಮೆಂಟ್‌ ಝೋನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ಮಾಹಿತಿ ನೀಡಿದರು.

ಮುಂಬೈನಿಂದ ಆಗಮಿಸಿದ್ದ ಇಬ್ಬರನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿತ್ತು, ಪರೀಕ್ಷಾ ವರದಿ ಪಾಸಿಟಿವ್ ಬಂದ ಹಿನ್ನೆಲೆ ವಾರ್ಡ್‌‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 212 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 140 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 72 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದು ಡಿಸಿ ಹೇಳಿದರು.

ಜೂನ್‌ 08ರ ಹಾಸನ ಜಿಲ್ಲೆ ಕೊರೊನಾ ಅಂಕಿ ಅಂಶ:

  • 212 ದೃಢಪಟ್ಟ ಒಟ್ಟು ಪ್ರಕರಣಗಳು.
  • 140 ಆಸ್ಪತ್ರೆಯಿಂದ ಬಿಡುಗಡೆ ಆದವರು.
  • 72 ಸಕ್ರಿಯ ಪ್ರಕರಣಗಳು.
  • 321 ಹೋಂ ಕ್ವಾರಂಟೈನ್​ನಲ್ಲಿ ಇರುವವರು.
  • 202 ಸಾಂಸ್ಥಿಕ ಕ್ವಾರಂಟೈನ್​ ನಲ್ಲಿ ಇರುವವರು.
  • ತಾಲೂಕುವಾರು ಪ್ರಕರಣಗಳು
  • ಚನ್ನರಾಯಪಟ್ಟಣ -152
  • ಹೊಳೆನರಸೀಪುರ- 24
  • ಅರಕಲಗೂಡು- 4
  • ಆಲೂರು- 15
  • ಹಾಸನ -14
  • ಅರಸೀಕೆರೆ- 3
  • ಒಟ್ಟು 212 ಪ್ರಕರಣಗಳು.

ABOUT THE AUTHOR

...view details