ಕರ್ನಾಟಕ

karnataka

ETV Bharat / state

ಅಗ್ಗೊಡ್ಲುವಿನಲ್ಲಿ 228 ಮಂದಿ ಮತದಾನ ವಂಚಿತ; ಮತಪಟ್ಟಿ ಪರಿಶೀಲಿಸಿ ತಕ್ಷಣ ಕ್ರಮ - ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ಗೊಡ್ಲು ಕ್ಷೇತ್ರ

ಸಾಣೇನಹಳ್ಳಿ- ಹನುಮನಹಳ್ಳಿ- ಗೋಣಿಮಠ ಗ್ರಾಮಗಳ ಸುಮಾರು 820 ಮತದಾರರಲ್ಲಿ ಸಾಣೆಹಳ್ಳಿಯ ಗ್ರಾಮದ 228 ಮಂದಿ ಮತದಾರರನ್ನು ಮತಪಟ್ಟಿಯಿಂದ ಕೈ ಬಿಡಲಾಗಿತ್ತು. ಹಾಗಾಗಿ ಅಗೋಡ್ಲು ಕ್ಷೇತ್ರದ ಮತದಾರರು ಮತ ಬಹಿಷ್ಕಾರ ಹಾಕುವ ಎಚ್ಚರಿಕೆಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದರು.

aggodlu
aggodlu

By

Published : Dec 27, 2020, 9:29 PM IST

ಹಾಸನ:ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನದಿಂದ ವಂಚಿತವಾಗುತ್ತಿದ್ದ 228 ಮಂದಿ ಮತದಾರರನ್ನು ಕೊನೆಗೂ ಸೇರ್ಪಡೆ ಮಾಡಿರುವ ಅಧಿಕಾರಿಗಳು, ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಮತದಾನ ವಂಚಿತರಾಗಿದ್ದ ಅಗ್ಗೋಡ್ಲು ಗ್ರಾಮಸ್ಥರು

ಈ ಘಟನೆ ಬೇಲೂರು ವಿಧಾನಸಭಾ ಕ್ಷೇತ್ರದ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ಗೊಡ್ಲು ಕ್ಷೇತ್ರದಲ್ಲಿ ನಡೆದಿದೆ. ಕ್ಷೇತ್ರಕ್ಕೆ ಒಳಪಡುವ ಸಾಣೇನಹಳ್ಳಿ- ಹನುಮನಹಳ್ಳಿ- ಗೋಣಿಮಠ ಗ್ರಾಮಗಳ ಸುಮಾರು 820 ಮತದಾರರಲ್ಲಿ ಸಾಣೆಹಳ್ಳಿಯ ಗ್ರಾಮದ 228 ಮಂದಿ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿತ್ತು.

ಮತದಾರರ ಪಟ್ಟಿಯಿಂದ ಇಷ್ಟೊಂದು ಮತದಾರರನ್ನು ಕೈಬಿಡಲು ತಾಂತ್ರಿಕ ದೋಷವೋ, ರಾಜಕೀಯ ಒತ್ತಡವೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯತನವೋ ಗೊತ್ತಾಗಿಲ್ಲ. ಆದರೆ ಮತದಾರರ ಪಟ್ಟಿಯಿಂದ ಇವರುಗಳನ್ನು ಕೈಬಿಟ್ಟಿದ್ದಕ್ಕೆ ಅಗೋಡ್ಲು ಕ್ಷೇತ್ರದ ಮತದಾರರು ಮತ ಬಹಿಷ್ಕಾರ ಹಾಕುವ ಎಚ್ಚರಿಕೆಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದರು.

ಓದಿ:ಅರಸೀಕೆರೆಯಲ್ಲಿ 100 ದಾಟಿದ ನಾಲ್ವರಿಂದ ಮತದಾನ

ಇವರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ಚುನಾವಣಾ ಅಧಿಕಾರಿಗಳನ್ನು ತಕ್ಷಣ ಗ್ರಾಮಕ್ಕೆ ಕಳುಹಿಸಿ ಸ್ಥಳದಲ್ಲಿಯೇ ಕೈಬಿಟ್ಟಿದ್ದ 228 ಮಂದಿ ಮತದಾರರನ್ನು ರಾತ್ರಿಪೂರ ತಿದ್ದುಪಡಿ ಮಾಡಿ ಮತದಾನದ ಪಟ್ಟಿಗೆ ಸೇರ್ಪಡೆ ಮಾಡಿಸುವ ಮೂಲಕ ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ.

ಕೊನೆಗೂ ಇಂದು ಮಧ್ಯಾಹ್ನ ಸಾಣೇನಹಳ್ಳಿ, ಹನುಮನಹಳ್ಳಿ ಹಾಗೂ ಗೋಣಿಮಠ ಗ್ರಾಮದ ಗ್ರಾಮಸ್ಥರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಲು ಯಶಸ್ವಿಯಾಗಿದ್ದಾರೆ ಹಾಗೂ ಜಿಲ್ಲಾಡಳಿತಕ್ಕೂ ಧನ್ಯವಾದ ತಿಳಿಸಿದ್ದಾರೆ.

ABOUT THE AUTHOR

...view details