ಸಕಲೇಶಪುರ: ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಕಲೇಶಪುರ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಶ್ರೀಗಂಧ ಮರ ಕಳ್ಳತನ: ಇಬ್ಬರು ಆರೋಪಿಗಳ ಬಂಧನ - Sakaleshapura hassan latest news
ಕಿರುಹುಣಸೆ ಗ್ರಾಮದಲ್ಲಿರುವ ಸರ್ವೆ.ನಂ. 78ರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡಿದ ಆಲೂರು ತಾಲೂಕಿನ ಕುದ್ರವಳ್ಳಿ ಗ್ರಾಮದ ಅಲೆಕ್ಸ್ ಹಾಗೂ ಸಕಲೇಶಪುರ ತಾಲೂಕಿನ ದರ್ಬಾರಪೇಟೆಯ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿದೆ.
ತಾಲೂಕಿನ ಕಿರುಹುಣಸೆ ಗ್ರಾಮದಲ್ಲಿರುವ ಸರ್ವೆ.ನಂ. 78ರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡಿದ ಆಲೂರು ತಾಲೂಕಿನ ಕುದ್ರವಳ್ಳಿ ಗ್ರಾಮದ ಅಲೆಕ್ಸ್ ಹಾಗೂ ಸಕಲೇಶಪುರ ತಾಲೂಕಿನ ದರ್ಬಾರಪೇಟೆಯ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಆರೋಪಿಗಳನ್ನು ಬಂಧಿಸಿ ಅವರಿಂದ ಒಂದು ಟಿವಿಎಸ್ ಬೈಕ್, ಒಂದು ಕತ್ತಿ ಹಾಗೂ 18 ಕೆ.ಜಿ ಶ್ರೀಗಂಧದ ಮರವನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಆಲೂರು ಹಾಗೂ ಸಕಲೇಶಪುರ ವಲಯದಲ್ಲಿ ಸಾಕಷ್ಟು ಶ್ರೀಗಂಧ ಕದ್ದಿದ್ದರು.
ಕಾರ್ಯಾಚರಣೆಯಲ್ಲಿ ಎ.ಸಿ.ಎಫ್ ಲಿಂಗರಾಜು, ಆರ್.ಎಫ್.ಓ ರವೀಂದ್ರ, ಡಿ.ಆರ್.ಎಫ್.ಓ ದಿನೇಶ್, ಅರಣ್ಯ ರಕ್ಷಕ ಮಹಾದೇವ್, ವೇಣುಗೋಪಾಲ್ ಸೇರಿದಂತೆ ಇತರರು ಭಾಗಿಯಾಗಿದ್ದರು.