ಕರ್ನಾಟಕ

karnataka

ETV Bharat / state

ಹಾಸನದಲ್ಲಿ 166 ಹೊಸ ಕೊರೊನಾ ಪ್ರಕರಣ, 25,400ಕ್ಕೇರಿದ ಸೋಂಕಿತರು

ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಆರೋಗ್ಯದ ಹೆಚ್ಚು ಗಮನ ಹರಿಸಬೇಕು. ಈ ಮೂಲಕ ಕೊರೊನಾ ತಡೆಗಟ್ಟುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

DHO satish
ಆರೋಗ್ಯಾಧಿಕಾರಿ ಸತೀಶ್

By

Published : Nov 4, 2020, 4:26 PM IST

ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 166 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 25,400ಕ್ಕೆ ಏರಿದೆ. 2 ಸಾವಿನೊಂದಿಗೆ ಮೃತರ ಸಂಖ್ಯೆ 434 ತಲುಪಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಇಂದು 55 ಮಂದಿ ಬಿಡುಗಡೆಯಾಗಿದ್ದು, ಈವರೆಗೂ 23,856 ಮಂದಿ ಗುಣಮುಖರಾಗಿದ್ದಾರೆ. 1,110 ಸಕ್ರಿಯ ಪ್ರಕರಣಗಳಿವೆ. ತೀವ್ರ ನಿಗಾ ಘಟಕದಲ್ಲಿ 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯಾಧಿಕಾರಿ ಸತೀಶ್

ತಾಲೂಕುವಾರು ಪ್ರಕರಣ:ಇಂದು ದಾಖಲಾಗಿರುವ ಪ್ರಕರಣದಲ್ಲಿ ಆಲೂರಿನಲ್ಲಿ 13, ಅರಕಲಗೂಡು-13, ಅರಸೀಕೆರೆ-24, ಬೇಲೂರು-11, ಚನ್ನರಾಯಪಟ್ಟಣ-36, ಹಾಸನ-39, ಹೊಳೆನರಸೀಪುರ-18, ಸಕಲೇಶಪುರ-12.

ಕೊರೊನಾ ಪ್ರಕರಣಗಳ ವರದಿ

ಉಸಿರಾಟ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಇದ್ದರೇ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details