ಹಾಸನ:ಜಿಲ್ಲೆಯಲ್ಲಿ ಇಂದು ಹೊಸದಾಗಿ 16 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 287ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.
ಹಾಸನದಲ್ಲಿ ಇಂದು 16 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 287ಕ್ಕೆ ಏರಿಕೆ - ಚನ್ನರಾಯಪಟ್ಟಣ ಕೋವಿಡ್ 19 ಪ್ರಕರಣ
ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 16 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 287ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಈವರಗೆ ಜಿಲ್ಲೆಯಲ್ಲಿ 196 ಮಂದಿ ಕೊರೊನಾ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಪ್ರಸ್ತುತ 90 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಬ್ಬರು ಮಾತ್ರ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಪತ್ತೆಯಾದ 16 ಪ್ರಕರಣಗಳಲ್ಲಿ ಇಬ್ಬರು ಹಾಸನ ತಾಲೂಕಿನವರಾಗಿದ್ದು, ಇನ್ನುಳಿದ ಎಲ್ಲರೂ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ. ಅದರಲ್ಲಿ 13 ಮಂದಿ ಮುಂಬೈನಿಂದ ಬಂದವರಾಗಿದ್ದಾರೆ.
ಜಿಲ್ಲೆಯ ತಾಲೂಕುವಾರು ಕೋವಿಡ್ ಪ್ರಕರಣಗಳು:
1. ಆಲೂರು 15
2. ಅರಕಲಗೂಡು 14
3. ಅರಸೀಕೆರೆ 5
4. ಬೆಲೂರು 7
5. ಚನ್ನರಾಯಪಟ್ಟಣ 190
6. ಹಾಸನ 30
7. ಹೊಳೆನರಸೀಪುರದಲ್ಲಿ 26 ಪ್ರಕರಣಗಳು ಈವರೆಗೆ ವರದಿಯಾಗಿದ್ದು, ಸಕಲೇಶಪುರದಲ್ಲಿ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ.