ಕರ್ನಾಟಕ

karnataka

ETV Bharat / state

ಹಾಸನದಲ್ಲಿ 157 ಕೊರೊನಾ ಕೇಸ್​​ ಪತ್ತೆ: ಇಬ್ಬರು ಸಾವು

ಹಾಸನ ಜಿಲ್ಲೆಯಲ್ಲಿ ಈವರೆಗೂ 4,272 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2,329 ಮಂದಿ ಡಿಸ್ಚಾರ್ಜ್​​​ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

Dr. Satish, Health and Family Welfare Officer
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್

By

Published : Aug 14, 2020, 8:06 PM IST

ಹಾಸನ: ಜಿಲ್ಲೆಯಲ್ಲಿ‌ ಇಂದು 157 ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4272ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 120ಕ್ಕೆ ತಲುಪಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ಅರಕಲಗೂಡಿನಲ್ಲಿ 10, ಅರಸೀಕೆರೆ 27, ಬೇಲೂರು 15, ಚನ್ನರಾಯಪಟ್ಟಣ 32, ಹಾಸನ 47, ಹೊಳೆನರಸೀಪುರ 24, ಸಕಲೇಶಪುರದಲ್ಲಿ 1, ಇತರೆ ಒಂದು ಕೊರೊನಾ ಪ್ರಕರಣ ದಾಖಲಾಗಿದೆ. ಇಂದು 139 ಜನ ಗುಣಮುಖರಾಗಿದ್ದು, ಈವರೆಗೂ 2,329 ಮಂದಿ ಡಿಸ್ಚಾರ್ಜ್​​​ ಆಗಿದ್ದಾರೆ. 1,823 ಸಕ್ರಿಯ ಪ್ರಕರಣಗಳಿವೆ ಎಂದು ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್

ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸೋಂಕು ತಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ತಾಲೂಕುವಾರು ಪ್ರಕರಣಗಳು

  1. ಆಲೂರು - 114
  2. ಅರಕಲಗೂಡು - 366
  3. ಅರಸೀಕೆರೆ - 583
  4. ಬೇಲೂರು - 303
  5. ಚನ್ನರಾಯಪಟ್ಟಣ - 654
  6. ಹಾಸನ - 1,708
  7. ಹೊಳೆನರಸೀಪುರ - 399
  8. ಸಕಲೇಶಪುರ - 120
  9. ಇತರ ಪ್ರಕರಣಗಳು -25

ABOUT THE AUTHOR

...view details