ಕರ್ನಾಟಕ

karnataka

ETV Bharat / state

ಶ್ರಮಿಕ್​ ರೈಲಿನ ಮೂಲಕ ಹಾಸನದಿಂದ ಬಿಹಾರಕ್ಕೆ ಹೊರಟ 1,440 ವಲಸೆ ಕಾರ್ಮಿಕರು - ಬಿಹಾರ ವಲಸೆ ಕಾರ್ಮಿಕರು

ಹಾಸನದಿಂದ ಶ್ರಮಿಕ್​ ರೈಲಿನ ಮೂಲಕ ಸುಮಾರು 1,440 ವಲಸೆ ಕಾರ್ಮಿಕರನ್ನ ಇಂದು ಸಂಜೆ 5 ಗಂಟೆಗೆ ಬಿಹಾರಕ್ಕೆ ಕಳುಹಿಸಲಾಗುತ್ತಿದೆ.

1,440 migrant workers going to Bihar by labor train
ಶ್ರಮಿಕ ರೈಲಿನ ಮೂಲಕ ಬಿಹಾರಕ್ಕೆ ಹೊರಟ 1,440 ವಲಸೆ ಕಾರ್ಮಿಕರು

By

Published : May 17, 2020, 3:14 PM IST

ಹಾಸನ: ಲಾಕ್​ಡೌನ್ ಹಿನ್ನೆಲೆ, ಕರ್ನಾಟಕದಲ್ಲಿ ಸಿಲುಕಿಕೊಂಡಿದ್ದ ಬಿಹಾರದ ಸುಮಾರು 1,440 ಕಾರ್ಮಿಕರನ್ನ ವಿಶೇಷ ಶ್ರಮಿಕ್​ ರೈಲಿನ ಮೂಲಕ ಹಾಸನದಿಂದ ಕಳುಹಿಸಿಕೊಡಲಾಗುತ್ತಿದೆ.

ಶ್ರಮಿಕ್​ ರೈಲಿನ ಮೂಲಕ ಬಿಹಾರಕ್ಕೆ ಹೊರಟ 1,440 ವಲಸೆ ಕಾರ್ಮಿಕರು

ಇಂದು ಸಂಜೆ 5 ಗಂಟೆಗೆ ಹಾಸನದಿಂದ ಹೊರಡಲಿರುವ ಈ ವಿಶೇಷ ರೈಲು ಬೆಂಗಳೂರು, ರಾಯದುರ್ಗ, ಬಳ್ಳಾರಿ, ಗುಂತಕಲ್ ಮಾರ್ಗವಾಗಿ ವಿಜಯವಾಡ ತಲುಪಲಿದ್ದು, ನಂತರ ವಿಶಾಖಪಟ್ಟಣ ಮಾರ್ಗವಾಗಿ ಒರಿಸ್ಸಾ ರಾಜ್ಯ ಹಾಗೂ ಜಾರ್ಖಂಡ್ ಮೂಲಕ ಬಿಹಾರಕ್ಕೆ ತೆರಳಲಿದೆ. ಹಾಸನದಿಂದ ಸಂಜೆ 5 ಗಂಟೆಗೆ ಹೊರಡುವ ರೈಲಿನಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 1,440 ಪ್ರಯಾಣಿಕರು 22 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಸರ್ಕಾರ ಹೊರರಾಜ್ಯಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟ ಹಿನ್ನೆಲೆ, ಸೇವಾಸಿಂಧು ಮೂಲಕ ಕರ್ನಾಟಕದಿಂದ ಮೊದಲ ಬಾರಿಗೆ ಹೊರರಾಜ್ಯಕ್ಕೆ 1,440 ಮಂದಿಯನ್ನು ಕಳಿಸಲಾಗುತ್ತಿದೆ.

ABOUT THE AUTHOR

...view details