ಕರ್ನಾಟಕ

karnataka

ETV Bharat / state

ಸೋಮವಾರದಿಂದ 14 ದಿನ ಚನ್ನರಾಯಪಟ್ಟಣ ಲಾಕ್​ಡೌನ್​ಗೆ ನಿರ್ಧಾರ​​! - MLA C N Balakrishna

ಚನ್ನರಾಯಪಟ್ಟಣ ತಾಲೂಕಿನ ಶಾಸಕ ಸಿ.ಎನ್​.ಬಾಲಕೃಷ್ಣ ಮುಂದಿನ 14 ದಿನ ತಾಲೂಕನ್ನು ಸಂಪೂರ್ಣ ಲಾಕ್​ಡೌನ್​ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧ ಇಂದು ಅಧಿಕಾರಿಗಳ ಸಭೆ ನಡೆಸಲಾಯ್ತು.

14-day Channarayapatnam Lockdown from Monday
ಸೋಮವಾರದಿಂದ 14 ದಿನ ಚನ್ನರಾಯಪಟ್ಟಣ ಲಾಕ್​ಡೌನ್​

By

Published : Jul 4, 2020, 5:35 PM IST

ಚನ್ನರಾಯಪಟ್ಟಣ(ಹಾಸನ): ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇರುವ ಹಿನ್ನೆಲೆ ತಾಲೂಕಿನ ಶಾಸಕ ಸಿ.ಎನ್​.ಬಾಲಕೃಷ್ಣ ಮುಂದಿನ 14 ದಿನ ತಾಲೂಕನ್ನು ಸಂಪೂರ್ಣ ಲಾಕ್​ಡೌನ್​ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧ ಇಂದು ಅಧಿಕಾರಿಗಳ ಸಭೆ ನಡೆಸಲಾಯ್ತು.

ಸೋಮವಾರದಿಂದ 14 ದಿನ ಚನ್ನರಾಯಪಟ್ಟಣ ಲಾಕ್​ಡೌನ್​

ನಾಳೆಯಿಂದ ರಾಜ್ಯದಾದ್ಯಂತ ಭಾನುವಾರದ ಲಾಕ್​ಡೌನ್​ ಜಾರಿಯಾಗಲಿದೆ. ಆದರೆ ಚನ್ನರಾಯಪಟ್ಟಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಪೂರ್ಣ ಲಾಕ್​ಡೌನ್​ ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಆದರೆ ವಾರದ ಮೂರು ದಿನಗಳಾದ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದ 11 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಬಹುದು. ಮದ್ಯದಂಗಡಿಗಳಿಗೂ ಸಹ ಇದೇ ನಿಯಮ ಅನ್ವಯವಾಗುತ್ತದೆ. ಉಳಿದ ಸಮಯದಲ್ಲಿ ಲಾಕ್​ಡೌನ್​ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ತಹಶೀಲ್ದಾರ್, ಶಾಸಕರು, ಎಂಎಲ್​ಸಿ ಹಾಗೂ ಅಂಗಡಿಗಳ ಮಾಲೀಕರು ಪಾಲ್ಗೊಂಡಿದ್ದು, ಎಲ್ಲರೂ ಸಹಕರಿಸಬೇಕು ಎಂದು ಕೇಳಿಕೊಂಡರು.

ABOUT THE AUTHOR

...view details