ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಒಂದೇ ದಿನ 13 ಪ್ರಕರಣ ಪತ್ತೆ: 67ಕ್ಕೇರಿದ ಸೋಂಕಿತರು - 13 Kovid-19 case found in Hassan

ಇಲ್ಲಿಯವರೆಗೆ ಹಾಸನಕ್ಕೆ ಹೊರ ರಾಜ್ಯಗಳಿಂದ 1,664 ಜನರು ಬಂದಿದ್ದಾರೆ. ಅವರೆಲ್ಲರ ಗಂಟಲು ದ್ರವ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಇನ್ನು 600 ಜನರ ತಪಾಸಣೆ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

DC. R. Girish
ಜಿಲ್ಲಾಧಿಕಾರಿ ಆರ್. ಗಿರೀಶ್

By

Published : May 21, 2020, 8:08 PM IST

ಹಾಸನ: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 13 ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.


ಮಹಾರಾಷ್ಟ್ರದಿಂದ ಅಗಮಿಸಿದವರಿಂದ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಇಂದು ಸೋಂಕು ಪತ್ತೆಯಾದವರಲ್ಲಿ 6 ಮಂದಿ ಹೊಳೆನರಸೀಪುರ ತಾಲೂಕು ಹಾಗೂ 7 ಮಂದಿ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ. ಇದುವರೆಗಿನ ವರದಿಯಂತೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಗರಿಷ್ಠ 42 ಮಂದಿ ಸೋಂಕಿತರು ಪತ್ತೆಯಾಗಿದ್ದು, ಹೊಳೆನರಸೀಪುರ 16, ಆಲೂರು 3, ಅರಕಲಗೂಡು 2, ಅರಸೀಕೆರೆ 1, ಹಾಸನದಲ್ಲಿ 3 ಪ್ರಕರಣ ದಾಖಲಾಗಿವೆ. ಹಾಸನ ತಾಲ್ಲೂಕಿನ 3 ಪ್ರಕರಣಗಳಲ್ಲಿ 2 ತಮಿಳುನಾಡು ಮೂಲದಿಂದ ಬಂದಿದ್ದು, ಉಳಿದ 65 ಪ್ರಕರಣಗಳು ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ದೃಢಪಟ್ಟಿವೆ ಎಂದು ಹೇಳಿದರು.

ಇನ್ನು ಎಲ್ಲಾ ಸೋಂಕಿತರನ್ನು ಹಾಸನದ ಕೋವಿಡ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಶಂಕಿತರನ್ನು ವಿವಿಧ ತಾಲೂಕುಗಳಲ್ಲಿನ ಸಾಂಸ್ಥಿಕ ಕೇಂದ್ರಗಳಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಮಹಾರಾಷ್ಟ್ರದಿಂದ 880 ಹಾಗೂ ತಮಿಳುನಾಡಿನಿಂದ 190 ಜನರು ಬಂದಿದ್ದಾರೆ. ಈವರೆಗೆ ಹೊರ ರಾಜ್ಯಗಳಿಂದ 1,664 ಜನ ಬಂದಿದ್ದಾರೆ. ಅವರೆಲ್ಲರ ಗಂಟಲು ದ್ರವ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಇನ್ನು 600 ಜನರ ತಪಾಸಣೆ ಬಾಕಿ ಇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details