ಕರ್ನಾಟಕ

karnataka

ETV Bharat / state

ಹಾಸನ: ಪತಂಜಲಿ ಯೋಗ ಪರಿವಾರದಿಂದ ಸಾಮೂಹಿಕ 108 ಸೂರ್ಯ ನಮಸ್ಕಾರ - hassan latest news

ಇಂದು ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ 108 ಸೂರ್ಯ ನಮುಸ್ಕಾರವು 7ರ ವರೆಗೂ ಮುಂದುವರೆಯಿತು. ಸೂರ್ಯ ಉದಯಿಸುವ ವೇಳೆಗೆ 108 ಸೂರ್ಯ ನಮಸ್ಕಾರವನ್ನು ಅಂತ್ಯಗೊಳಿಸಿದರು. ಪತಂಜಲಿ ಯೋಗ ಸಮಿತಿಯ ಹರಿಹರಪುರ ಶ್ರೀಧರ್ ಮಾರ್ಗದರ್ಶನದಲ್ಲಿ ಪರಿವಾರದವರು ಒಂದು ಗಂಟೆ ಕಾಲ ಸೂರ್ಯ ನಮುಸ್ಕಾರವನ್ನು ಹೇಳಿಕೊಡುವ ಮೂಲಕ ಕಾರ್ಯವನ್ನು ಯಶಸ್ವಿಗೊಳಿಸಿದರು.

108 Surya Namaskara by the Patanjali Yoga Parivar at hassan
ಪತಂಜಲಿ ಯೋಗ ಪರಿವಾರದಿಂದ ಸಾಮೂಹಿಕ 108 ಸೂರ್ಯ ನಮಸ್ಕಾರ; ಹಾಸನ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಭಾಗಿ

By

Published : Feb 20, 2021, 1:55 PM IST

ಹಾಸನ: ಸೂರ್ಯ ನಮಸ್ಕಾರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಮತ್ತು ಚಿಕಿತ್ಸೆ ಆಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ ಹೇಳಿದರು.

​ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪತಂಜಲಿ ಯೋಗ ಪರಿವಾರದಿಂದ ಇಂದು ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರದಲ್ಲಿ ಸಾರ್ವಜನಿಕರ ಜೊತೆ ತಾವು ಪಾಲ್ಗೊಂಡು ನಂತರ ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು. ಏಳು ಲೋಕದ ಸಂಚಾರಕ್ಕಾಗಿ ಸೂರ್ಯ ಹೊರಟಿದ್ದ ದಿನದ ಅಂಗವಾಗಿ ರಥಸಪ್ತಮಿಯನ್ನು ಆಚರಿಸಲಾಗುತ್ತಿದೆ. ಸೂರ್ಯ ನಮಸ್ಕಾರ ಮತ್ತು ಸೂರ್ಯನ ಆರಾಧನೆ ನಮ್ಮ ಪ್ರಕೃತಿಯ ಮೂಲವಾಗಿದ್ದು, ಎಲ್ಲರಿಗೂ ಸೂರ್ಯ ಆದಿ ದೇವ. ಜಗತ್ತಿನ ಚೈತನ್ಯಕ್ಕೆ ಸೂರ್ಯನೇ ಕಾರಣನಾಗಿರುತ್ತಾನೆ ಎಂದರು.

ಸಾಮೂಹಿಕ 108 ಸೂರ್ಯ ನಮಸ್ಕಾರ

ಮನುಷ್ಯನಲ್ಲಿ ಡಿ ವಿಟಮಿನ್ ಕಡಿಮೆಯಾದರೆ ಸೂರ್ಯನ ಬೆಳಕಿಗೆ ಬನ್ನಿ ಎಂದು ಹೇಳುವಂತದ್ದು ವೈಜ್ಞಾನಿಕವಾಗಿ ಖಚಿತಪಡಿಸಲಾಗಿದೆ. ಸೂರ್ಯನ ಆರಾಧನೆ ಒಂದು ಪವಿತ್ರವಾದ ಕೆಲಸ. ಸೂರ್ಯ ನಮಸ್ಕಾರ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉತ್ತರವನ್ನು ಮತ್ತು ಚಿಕಿತ್ಸೆಯನ್ನು ಕೊಡುತ್ತದೆ ಎಂದು ಸಲಹೆ ನೀಡಿದರು.

​ಪತಂಜಲಿ ಯೋಗ ಸಮಿತಿಯ ಸಂರಕ್ಷಕರಾದ ಹರಿಹರಪುರ ಶ್ರೀಧರ್ ಮಾತನಾಡಿ, ಯೋಗ ಸಾಧನೆಯಲ್ಲಿ ಇರುವವರು ತಮ್ಮ ಒಳಗಿನ ಕಲ್ಮಶಗಳೇನಿವೆ ದ್ವೇಷ, ಮತ್ಸರ ಇವೆಲ್ಲವನ್ನು ಸುಟ್ಟು ಹಾಕುವ ನಿಟ್ಟಿನಲ್ಲಿ ಇಂದು ಸಂಕಲ್ಪ ಮಾಡೋಣ. ನಮ್ಮ ಮುಂದಿನ ಜೀವನ ಯೋಗಮಯವಾಗಿರುತ್ತದೆ ಮತ್ತು ಆನಂದಮಯವಾಗಿರುತ್ತದೆ ಎಂದು ಪ್ರತಿಜ್ಞೆಯನ್ನು ಎಲ್ಲರು ಮಾಡುವ ಮೂಲಕ ಉತ್ತಮ ಜೀವನ ಸಾಗಿಸೋಣ ಎಂದರು. ಈ ದಿನ ಭಗವಾನ್ ಸೂರ್ಯದೇವನು ಉತ್ತರಾಯಣಕ್ಕೆ ಪ್ರವೇಶವನ್ನು ಮಾಡುವುದರಿಂದ ಬೆಳಕು ಹೆಚ್ಚಾಗುತ್ತಾ ಹೋಗುತ್ತದೆ. ಸೂರ್ಯ ನಮುಸ್ಕಾರದಂತಹ ಯೋಗ ಮಾಡುವುದರಿಂದ ಜ್ಞಾನ ವೃದ್ಧಿ, ಶಕ್ತಿ, ಉಲ್ಲಾಸ ಲಭಿಸಿ, ಮನಸ್ಸಿನಲ್ಲಿ ಉತ್ಸಾಹ ತುಂಬಿರುತ್ತದೆ. ಜೊತೆಗೆ ಕೆಲಸಕ್ಕೆ ಸ್ಫೂರ್ತಿ ಬರುತ್ತದೆ ಎಂದರು. ಪ್ರತಿ ನಿತ್ಯ ಕೆಲ ಸಮಯವನ್ನು ಯೋಗಕ್ಕೆ ಮೀಸಲಿಡುವ ಮೂಲಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಕಾಣಬಹುದು ಎಂದು ಸಲಹೆ ನೀಡಿದರು.

ಈ ಸುದ್ದಿಯನ್ನೂ ಓದಿ:ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವ್ಯಾಕ್ಸಿನ್ ಪಡೆಯಲು ಇಂದೇ ಡೆಡ್ ಲೈನ್

ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ 108 ಸೂರ್ಯ ನಮುಸ್ಕಾರವು 7ರ ವರೆಗೂ ಮುಂದುವರೆಯಿತು. ಸೂರ್ಯ ಉದಯಿಸುವ ವೇಳೆಗೆ 108 ಸೂರ್ಯ ನಮಸ್ಕಾರವನ್ನು ಅಂತ್ಯಗೊಳಿಸಿದರು. ಪತಂಜಲಿ ಯೋಗ ಸಮಿತಿಯ ಹರಿಹರಪುರ ಶ್ರೀಧರ್ ಮಾರ್ಗದರ್ಶನದಲ್ಲಿ ಪರಿವಾರದವರು ಒಂದು ಗಂಟೆ ಕಾಲ ಸೂರ್ಯ ನಮುಸ್ಕಾರವನ್ನು ಹೇಳಿಕೊಡುವ ಮೂಲಕ ಕಾರ್ಯವನ್ನು ಯಶಸ್ವಿಗೊಳಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿ ನಂತರ ದೇವರ ಜ್ಞಾನ ಮಾಡುವ ಮೂಲಕ ಗೌರವ ಸೂಚಿಸಿದರು.

ABOUT THE AUTHOR

...view details