ಹಾಸನ: ಜಿಲ್ಲೆಯಲ್ಲಿ ಇಂದು 104 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,842ಕ್ಕೆ ಏರಿದೆ. ಅಲ್ಲದೆ, ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 50ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಹಾಸನದಲ್ಲಿ 104 ಹೊಸ ಕೊರೊನಾ ಪ್ರಕರಣಗಳು ಪತ್ತೆ: ಐದು ಮಂದಿ ಸಾವು - ಕೊರೊನಾ ವೈರಸ್
ಹಾಸನ ಜಿಲ್ಲೆಯಲ್ಲಿ ಇಂದು 104 ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ, ಮಹಾಮಾರಿ ಸೋಂಕಿಗೆ ಐದು ಮಂದಿ ಬಲಿಯಾಗಿದ್ದಾರೆ. ಈವರೆಗೂ ದಾಖಲಾದ 1,842 ಸೋಂಕಿತರ ಪೈಕಿ 880 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
![ಹಾಸನದಲ್ಲಿ 104 ಹೊಸ ಕೊರೊನಾ ಪ್ರಕರಣಗಳು ಪತ್ತೆ: ಐದು ಮಂದಿ ಸಾವು Dr. Satish, District Inspector of Hassan](https://etvbharatimages.akamaized.net/etvbharat/prod-images/768-512-8205870-448-8205870-1595937672434.jpg)
ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್
ಇಂದು 33 ಮಂದಿ ಗುಣಮುಖರಾಗಿದ್ದು, ಈವರೆಗೂ 880 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 912 ಸಕ್ರಿಯ ಪ್ರಕರಣಗಳಿವೆ. ಹೊಸದಾಗಿ ಪತ್ತೆಯಾದ 104 ಪ್ರಕರಣಗಳಲ್ಲಿ ಆಲೂರು-5, ಸಕಲೇಶಪುರ-2, ಬೇಲೂರು, ಹೊಳೆನರಸೀಪುರಲ್ಲಿ - 1, ಹಾಸನ 50, ಅರಸೀಕೆರೆ-16, ಚನ್ನರಾಯಪಟ್ಟಣ -8, ಅರಕಲಗೂಡು ತಾಲೂಕಿನಲ್ಲಿ 11 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.
ಹಾಸನ ಜಿಲ್ಲೆಯ ಕೊರೊನಾ ಪ್ರಕರಣಗಳ ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಡಾ. ಸತೀಶ್
ಕೋವಿಡ್-19 ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಉಸಿರಾಟದಲ್ಲಿ ತೊಂದರೆ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕೆಂದು ಡಾ. ಸತೀಶ್ ಮನವಿ ಮಾಡಿದರು.