ತುಮಕೂರು: ಲೋಕಸಭಾ ಕ್ಷೇತ್ರಕ್ಕೆ 23 ಅಭ್ಯರ್ಥಿಗಳು ಒಟ್ಟು 35 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆ ದಿನವಾಗಿದ್ದರಿಂದ ಬಿಜೆಪಿ, ಜೆಡಿಎಸ್ ಸೇರಿದಂತೆ ಪಕ್ಷೇತರರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರ: ಹೆಚ್ಡಿಡಿ ಸೇರಿ 23 ಅಭ್ಯರ್ಥಿಗಳಿಂದ 35 ನಾಮಪತ್ರ ಸಲ್ಲಿಕೆ - ನಾಮಪತ್ರ ಸಲ್ಲಿಕೆ
ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಜಿ ಎಸ್ ಬಸವರಾಜು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಛಾಯಾ ಮೋಹನ್ ತಮ್ಮ ನಾಮಪತ್ರವ ಸಲ್ಲಿಸಿದ್ದಾರೆ.
ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಜಿ ಎಸ್ ಬಸವರಾಜು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಛಾಯಾ ಮೋಹನ್ ತಮ್ಮ ನಾಮಪತ್ರವ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಜಿ ನಾಗೇಂದ್ರ, ಡಿ ಶರಧಿಶಯನ, ಕಪನಿ ಗೌಡ, ಕೆವಿ ಶ್ರೀನಿವಾಸ್, ಎನ್ ಶಿವಣ್ಣ, ಡಿ ನಾಗರಾಜಯ್ಯ, ಸಿದ್ದರಾಮೇಗೌಡ , ಸಿಪಿ ಮಹಾಲಕ್ಷ್ಮಿ , ಕೆಎನ್ ರಾಜಣ್ಣ , ಮುದ್ದ ಹನುಮೇಗೌಡ , ಪ್ರಕಾಶ್ ಆರ್ ಜೈನ್, ಹನುಮಂತರಾಯ, ಬಿ ಎಸ್ ಮಲ್ಲಿಕಾರ್ಜುನಯ್ಯ, ಎಚ್ ಎಂ ಉದಯ ಶಂಕರ್, ಹೆಚ್ ನಾಗಾರ್ಜುನ , ಟಿ ಎನ್ ಕುಮಾರಸ್ವಾಮಿ, ಜಿಕೆ ಶಮಿ, ಹನುಮಂತ ರಾಮ ನಾಯಕ, ಹುಚ್ಚೇಗೌಡ ಎಂಬುವರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಮಾರ್ಚ್ 27 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಮಾರ್ಚ್ 29 ಕಡೆ ದಿನವಾಗಿರುತ್ತದೆ.