ಕರ್ನಾಟಕ

karnataka

ETV Bharat / state

ಬೆಂ.ಗ್ರಾಮಾಂತರ ಅಭ್ಯರ್ಥಿಯಾಗಿ ಅಶ್ವತ್ಥ್​ ನಾರಾಯಣ ನಾಮಪತ್ರ... ಆಸ್ತಿ ಘೋಷಣೆ ಮಾಡಿದ ಬಿಜೆಪಿ ಅಭ್ಯರ್ಥಿ - ರಾಮನಗರ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಶ್ವತ್ಥ್ ನಾರಾಯಣ್ ಒಟ್ಟು 26,25,38,000 ರುಪಾಯಿ ಚರಾಸ್ಥಿ ಮತ್ತು ಸ್ಥಿರಾಸ್ತಿ ಘೋಷಿಸಿದ್ದಾರೆ.

ಬೆಂ.ಗ್ರಾಮಾಂತರ ಅಭ್ಯರ್ಥಿ ಅಶ್ವತ್ಥ್​ ನಾರಾಯಣ

By

Published : Mar 27, 2019, 3:42 AM IST

Updated : Mar 27, 2019, 10:18 AM IST

ರಾಮನಗರ : ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಶ್ವತ್ಥ್ ನಾರಾಯಣ್ ಒಟ್ಟು 26,25,38,000 ರುಪಾಯಿ ಚರಾಸ್ಥಿ ಮತ್ತು ಸ್ಥಿರಾಸ್ತಿ ಘೋಷಿಸಿದ್ದಾರೆ. ಅಶ್ವತ್ಥ್ ನಾರಾಯಣ್ ಬಳಿ 32,52,000 ರುಪಾಯಿ , ಪತ್ನಿ ಸುನಿತಾ 1,75,000 ರೂ ಸೇರಿ 34,27,000 ರೂ ವೌಲ್ಯದ ಚರಾಸ್ಥಿ ಹಾಗೂ ಅಶ್ವತ್ಥ್ 22,70,56,00 ರೂ. ಪತ್ನಿ ಸುನಿತಾ 3,20,55,000 ಸೇರಿ 25,91,11,000 ರುಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ.

ಆದಾಯ ತೆರಿಗೆ ಕಾನೂನು ಪ್ರಕಾರ ಆದಾಯ ಮಿತಿಯಲ್ಲಿರುವ ಕಾರಣ ವಾರ್ಷಿಕ ಆದಾಯವನ್ನು ನಮೂದಿಸಿಲ್ಲ. ಅಶ್ವತ್ಥ್ ಕೃಷಿ , ವ್ಯಾಪಾರ ಹಾಗೂ ಪತ್ನಿ ಸುನಿತಾ ಕಟ್ಟಡಗಳ ಬಾಡಿಗೆಯನ್ನು ಆದಾಯ ಮೂಲವಾಗಿ ತೋರಿಸಿದ್ದಾರೆ. ಅಶ್ವತ್ಥ್ ಬಳಿ 46.80 ಲಕ್ಷ ಮೌಲ್ಯದ 1850 ಗ್ರಾಂ ಚಿನ್ನ, 2.27 ಲಕ್ಷ ಮೌಲ್ಯದ 5530 ಗ್ರಾಂ ಬೆಳ್ಳಿ , ಪತ್ನಿ ಬಳಿ 17.60 ಲಕ್ಷ ಮೌಲ್ಯದ 550 ಗ್ರಾಂ ಚಿನ್ನ, 1.3ಲಕ್ಷ ಮೌಲ್ಯದ 2510 ಗ್ರಾಂ ಬೆಳ್ಳಿ ಇದೆ.

ಬೆಂ.ಗ್ರಾಮಾಂತರ ಅಭ್ಯರ್ಥಿ ಅಶ್ವತ್ಥ್​ ನಾರಾಯಣ

ಅಶ್ವತ್ಥ್ 5 ಲಕ್ಷ ಮತ್ತು ಪತ್ನಿ ಸುನಿತಾ 75 ಸಾವಿರ ರೂಪಾಯಿ ನಗದು ಹೊಂದಿದ್ದಾರೆ. ಅಶ್ವತ್ಥ್ 73 ಲಕ್ಷ ರುಪಾಯಿ ಸಾಲ ನೀಡಿದ್ದು, ಅವರು ಬಳಿ ಒಂದು ಹೊಂಡಾ ಆಕ್ಟಿವಾ ಸ್ಕೂಟರ್ , ಟೊಯೋಟಾ ಇನೋವಾ ಕಾರಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ 192 A ಅಡಿಯಲ್ಲಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಹಾಗೂ ಸಬ್​ಇನ್ಸ್​​ಪೆಕ್ಟರ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ನಡೆಸಿದ ಹೋರಾಟ ಕಾನೂನು ಬದ್ಧವಾಗಿ ಇರದ ಕಾರಣ ಪ್ರಕರಣ ದಾಖಲಾಗಿದೆ. ಮಂಡ್ಯ ಜಿಲ್ಲೆ ನಾಗಮಗಲ ತಾಲೂಕು ಹುಲ್ಲೇನಹಳ್ಳಿಯಲ್ಲಿ 20 ಗುಂಟೆ, ದಾಸನಪುರ, ರಾಮಸಂದ್ರ ಗ್ರಾಮಗಳಲ್ಲಿ ಗುಂಟೆ ಲೆಕ್ಕದಲ್ಲಿ ಭೂಮಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

Last Updated : Mar 27, 2019, 10:18 AM IST

ABOUT THE AUTHOR

...view details