ಕರ್ನಾಟಕ

karnataka

ETV Bharat / state

ಹೆಚ್​ ವಿಶ್ವನಾಥ್​ ಭೇಟಿ ಮಾಡಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ! - ಕಾಂಗ್ರೆಸ್​

ಹೆಚ್.ವಿಶ್ವನಾಥ್ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯಶಂಕರ ಅವರನ್ನು ಸೋಲಿಸಿದರು. ಆದರೆ ಇದೀಗ ಮೈತ್ರಿ ಸರ್ಕಾರದಂತೆ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ವಿಜಯಶಂಕರ್​​ ಕಣಕ್ಕಿಳಿದಿದ್ದು,ಅವರಿಗೆ ಜೆಡಿಎಸ್​ ಸಾಥ್​ ನೀಡಲಿದೆ.

ಹೆಚ್​ ವಿಶ್ವನಾಥ್​ ಭೇಟಿ

By

Published : Mar 27, 2019, 2:45 AM IST

ಮೈಸೂರು:ಲಘು ಹೃದಯಾಘಾತಕ್ಕೊಳಕ್ಕಾಗಿ ಚೇತರಿಸಿಕೊಂಡಿರುವ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ವಿಶ್ವನಾಥ್ ಅವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಮಂಗಳವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಕೆ.ಆರ್.ನಗರ ತಾಲ್ಲೂಕಿನ ಅಡಗೂರು ಗ್ರಾಮದಲ್ಲಿರುವ ವಿಶ್ವನಾಥ್ ಅವರ ಮನೆಗೆ ಭೇಟಿ ನೀಡಿದ ವಿಜಯಶಂಕರ್ ಆರೋಗ್ಯ ವಿಚಾರಿಸಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿ,ಚುನಾವಣೆ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದರು.

ತದನಂತರ ಕೆ.ಆರ್.ನಗರದಿಂದ ಮೈಸೂರಿಗೆ ಆಗಮಿಸಿದ ಹೆಚ್.ವಿಜಯಶಂಕರ್ , ವಿಜಯನಗರದಲ್ಲಿರುವ ಉನ್ನತ ಶಿಕ್ಷಣ ಸಚಿವ ಹಾಗೂ ಜೆಡಿಎಸ್​ ಮುಖಂಡ ಜಿ.ಡಿ.ದೇವೇಗೌಡರನ್ನು ಭೇಟಿ ಮಾಡಿದರು. ಇದೇ ವೇಳೆ ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಹೆಚ್.ವಿಶ್ವನಾಥ್ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯಶಂಕರ ಅವರನ್ನು ಸೋಲಿಸಿದರು.ಅದರೆ ಬದಲಾದ ರಾಜಕೀಯ ವಿದ್ಯಾಮಾನದಿಂದ ವಿಶ್ವನಾಥ್ ಜೆಡಿಎಸ್​​ ಸೇರ್ಪಡೆಗೊಂಡರೆ, ವಿಜಯಶಂಕರ್ ಕಾಂಗ್ರೆಸ್ ಸೇರ್ಪಡೆಗೊಂಡರು. 2019ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮದಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಿಂದ ಎರಡು ಪಕ್ಷದ ಮುಖಂಡರು ಅಭ್ಯರ್ಥಿಗಳ ಪರ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ.

ABOUT THE AUTHOR

...view details