ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾತ್ರೋರಾತ್ರಿ ಕಣಕ್ಕಿಳಿದಿರುವ ತೇಜಸ್ವಿ ಸೂರ್ಯ ಕೇವಲ ಮಾತಿನ ಶ್ರೀಮಂತ, ಇವರ ಬಳಿ ಬಿಡಿಗಾಸೂ ಚಿನ್ನವಿಲ್ಲವಂತೆ.
ರಾತ್ರೋರಾತ್ರಿ ಅಖಾಡಕ್ಕಿಳಿದ ತೇಜಸ್ವಿ ಸೂರ್ಯ ಬಳಿ ಚಿನ್ನವೂ ಇಲ್ಲ, ಸಾಲವನ್ನೂ ಮಾಡಿಕೊಂಡಿಲ್ಲ! - ಆಸ್ತಿ ಘೋಷಣೆ
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಹೊಸ ಮುಖ ತೇಜಸ್ವಿ ಸೂರ್ಯಗೆ ಬಿಜೆಪಿ ಮಣೆ ಹಾಕಿದೆ. ಇದೀಗ ಅವರು ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ವಿವರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ತಾನು ಯಾವುದೇ ಚಿನ್ನಾಭರಣ ಹೊಂದಿಲ್ಲ ಎಂದು ತಿಳಿಸಿರುವ ಅವರು, ಯಾವುದೇ ಬ್ಯಾಂಕ್, ಸಂಸ್ಥೆಗಳಲ್ಲಿ ಸಾಲ ಕೂಡ ಮಾಡಿಲ್ಲ ಎಂದು ವಿವರಿಸಿದ್ದಾರೆ.
ತೇಜಸ್ವಿ ಸೂರ್ಯ ಬಳಿ ಇರುವ ಒಟ್ಟು ಚರಾಸ್ತಿ ಮೌಲ್ಯ 13.46 ಲಕ್ಷ ರೂ. ಮೊತ್ತದ್ದು. ಯಾವುದೇ ಬಗೆಯ ಸ್ಥಿರಾಸ್ತಿ ಹೊಂದಿರದ ತೇಜಸ್ವಿ ಸೂರ್ಯ, 5.12 ಲಕ್ಷ ರೂ ವಾರ್ಷಿಕ ಆದಾಯ ತೋರಿಸಿದ್ದಾರೆ.ತೇಜಸ್ವಿ ಸೂರ್ಯ ಕೈಯಲ್ಲಿರುವ ಹಣ 72 ಸಾವಿರ ರೂ. ಆಗಿದ್ದರೆ, ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ, ವಿಮೆ, ಉಳಿತಾಯ ಹೂಡಿಕೆ ಹಣ 13.46 ಲಕ್ಷ ರೂ. ಇದೆ.