ಗದಗ: ಯುವತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಮುಂಡರಗಿಯಲ್ಲಿ ನಡೆದಿದೆ. ಪಟ್ಟಣದ ಹೇಮಂತಗೌಡ ಪಾಟೀಲ್ ಅವರ ಬಿಲ್ಡಿಂಗ್ನಲ್ಲಿರುವ, ಪತಂಜಲಿ ಮಾರಾಟ ಮಳಿಗೆಯಲ್ಲಿ ಈ ದುರ್ಘಟನೆ ನಡೆದಿದೆ.
ಮನೆ ಬಿಟ್ಟು ಹೋದ ತಂದೆ, ಮೃತನಾದ ಸಾಕು ತಂದೆ: ಮನನೊಂದು ಯುವತಿ ಆತ್ಮಹತ್ಯೆ..! - young woman committed suicide in gadag
ಮೃತಳ ತಂದೆ ಮನೆ ಬಿಟ್ಟು ಹೋಗಿದ್ದರು. ಇತ್ತೀಚೆಗೆ ಸಾಕು ತಂದೆಯೂ ಸಾವನ್ನಪ್ಪಿದ್ದ ಹಿನ್ನೆಲೆ, ದೀಪಾ ತುಂಬಾ ನೊಂದಿದ್ದಳು ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ತಾನು ಕೆಲಸ ಮಾಡುತಿದ್ದ ಪತಂಜಲಿ ಮಾರಾಟ ಮಳಿಗೆಯಲ್ಲಿ ಇಂದು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಮನನೊಂದು ಯುವತಿ ಆತ್ಮಹತ್ಯೆ
ಮೃತಳನ್ನು ದೀಪಾ ಕಾಗನೂರಮಠ ಎಂದು ಗುರುತಿಸಲಾಗಿದ್ದು, ಕಳೆದ 10 ವರ್ಷಗಳ ಹಿಂದೆ ಮೃತಳ ತಂದೆ ಮನೆ ಬಿಟ್ಟು ಹೋಗಿದ್ದರು. ಇತ್ತೀಚೆಗೆ ಸಾಕು ತಂದೆಯೂ ಸಾವನ್ನಪ್ಪಿದ್ದ ಹಿನ್ನೆಲೆ, ದೀಪಾ ತುಂಬಾ ನೊಂದಿದ್ದಳು ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ತಾನು ಕೆಲಸ ಮಾಡುತಿದ್ದ ಪತಂಜಲಿ ಮಾರಾಟ ಮಳಿಗೆಯಲ್ಲಿ ಇಂದು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಈ ಕುರಿತು ಡೆತ್ ನೋಟ್ನಲ್ಲಿ ಯುವತಿ ಈ ವಿಚಾರ ಬರೆದಿಟ್ಟಿದ್ದಾಳೆ ಎಂದು ಪೊಲೀಸರಿಂದ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಮುಂಡರಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.