ಗದಗ:ಉತ್ತರ ಕರ್ನಾಟಕದಲ್ಲಿ ಬರದ ಬೇಗೆಗೆ ಸಿಲುಕಿ ಊರ ಸಹವಾಸವೇ ಬೇಡ ಅಂತ ಅದೆಷ್ಟೋ ಜನ ಪಟ್ಟಣಗಳ ಬಸ್ ಹತ್ತಿದ್ದಾರೆ. ಆದರೆ ಇಲ್ಲೊಬ್ಬ ಯುವ ರೈತ ಮಾತ್ರ ಯಾವುದಕ್ಕೂ ಎದೆಗುಂದದೇ ಕೃಷಿ ಕಾಯಕದಲ್ಲೇ ತೊಡಗಿಸಿಕೊಂಡು ಮಾದರಿ ರೈತನೆನೆಸಿದ್ದಾನೆ.
ಮಾವಿನ ಜೊತೆ ತರಹೇವಾರಿ ಬೆಳೆ ಬೆಳೆದು ಯಶಸ್ಸು ಕಂಡ ಯುವ ರೈತ! - undefined
ಉತ್ತರ ಕರ್ನಾಟಕದಲ್ಲಿ ಬರದ ಬೇಗೆಗೆ ಸಿಲುಕಿ ಊರ ಸಹವಾಸವೇ ಬೇಡ ಅಂತ ಅದೆಷ್ಟೋ ಜನ ಪಟ್ಟಣಗಳ ಬಸ್ ಹತ್ತಿದ್ದಾರೆ. ಆದರೆ ಇಲ್ಲೊಬ್ಬ ಯುವ ರೈತ ಮಾತ್ರ ಯಾವುದಕ್ಕೂ ಎದೆಗುಂದದೇ ಕೃಷಿ ಕಾಯಕದಲ್ಲೇ ತೊಡಗಿಸಿಕೊಂಡು ಮಾದರಿ ರೈತನೆನೆಸಿದ್ದಾನೆ.
ಮಾವಿನ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತನಾಗಿರೋ ಯುವ ರೈತನ ಹೆಸರು ರಮೇಶ ಕಳಕರೆಡ್ಡಿ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದವರು. ಇವರು ಸಾವಯವ ಕೃಷಿ ಮೂಲಕ ಬಾಳನ್ನು ಹಸನ ಮಾಡಿಕೊಂಡಿದ್ದಾರೆ. ತಮ್ಮ ತಂದೆ ಮಾಡಿಟ್ಟ ಎಂಟು ಎಕರೆ ಮಾವಿನ ತೋಟ ಈತನ ಪರಿಶ್ರಮಕ್ಕೆ ತಕ್ಕಂತೆ ಮಾವಿನ ಹಣ್ಣಿನಂತೆ ರಾಜನನ್ನಾಗಿ ಮಾಡಿದೆ. ಕಳೆದ 13 ವರ್ಷಗಳಿಂದ ಬೇಸಾಯ ಮಾಡಿ ನಾನಾ ರೀತಿಯಲ್ಲಿ ಬೆಳೆ ಬೆಳೆದು ಕೈ ತುಂಬಾ ಸಂಪಾದನೆ ಮಾಡ್ತಿದಾರೆ. ಕೇವಲ ಮಾವು ಬೆಳೆಯ ಮೇಲೆ ಅವಲಂಬಿತರಾಗದೇ ಇದೇ ಜಮೀನಿನಲ್ಲಿ ಎರಡು ಎಕರೆ ರೇಷ್ಮೆ ಹುಳುಗಳಿಗಾಗಿ ಹಿಪ್ಪು ನೇರಳೆ ಬೆಳೆ ಸಹ ಬೆಳೆದಿದಾರೆ. ಇನ್ನುಳಿದ ಆರು ಎಕರೆಯಲ್ಲಿ ಬೆನಿಷ್, ಆಪೋಸ್, ಕೇಸರ್, ಸಿಂಧೋರ್, ರಸ್ಪುರಿ, ಮಲ್ಲಿಕ್ ಹೀಗೆ ಹಲವು ಜಾತಿಯ 345 ಮಾವಿನ ಮರಗಳನ್ನು ಬೆಳೆದಿದ್ದಾರೆ. ಜೊತೆಗೆ 100 ಚಿಕ್ಕು, 50 ಪೇರಲ, 50 ಮೋಸಂಬಿ, 10 ಹಲಸು, 20 ಲಿಂಬು, 300 ತೇಗ, 100 ತೆಂಗು, 30 ನೇರಲ, 10 ನೆಲ್ಲಿ ಹಾಗೂ 50 ನುಗ್ಗೆ ಗಿಡಗಳನ್ನು ಬೆಳೆದಿದ್ದಾರೆ.