ಕರ್ನಾಟಕ

karnataka

ETV Bharat / state

ಗದಗ: ಕೊರೊನಾ ಸೋಂಕಿತ ಮಹಿಳೆ‌ ನಾಪತ್ತೆ! - ಗದಗ ಕೊರೊನಾ ನ್ಯೂಸ್

ನಿನ್ನೆ 40 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಪೈಕಿ 39 ಜನರನ್ನು ಜಿಮ್ಸ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಓರ್ವ ಮಹಿಳೆ ಮಾತ್ರ ತಪ್ಪು ವಿಳಾಸ ಕೊಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

Gagag corona case
Gagag corona case

By

Published : Jul 12, 2020, 7:55 PM IST

ಗದಗ:ಕೊರೊನಾ ಸೋಂಕಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಇಲ್ಲಿ ನಡೆದಿದೆ. ನಿನ್ನೆ ಒಂದೇ ದಿ‌ನ 40 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಪೈಕಿ 39 ಜನರನ್ನು ಜಿಮ್ಸ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಓರ್ವ ಮಹಿಳೆ ಮಾತ್ರ ತಪ್ಪು ವಿಳಾಸ ಕೊಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿರುವ ಈ ಮಹಿಳೆಯಿಂದ ಗದಗ-ಬೆಟಗೇರಿ ಅವಳಿ ನಗರದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಮಹಿಳೆಯನ್ನು ಹುಡುಕಲು ಜಿಲ್ಲಾಡಳಿತ ಹರಸಾಹಸ ಪಡುವಂತಾಗಿದೆ. ಆರೋಗ್ಯ ಇಲಾಖೆಗೆ ತಪ್ಪು ವಿಳಾಸ ನೀಡಿ ಯಾಮಾರಿಸಿರುವ ಈ ಮಹಿಳೆ, ಅವಳಿ‌ ನಗರದ ಹಲವೆಡೆ ಓಡಾಡಿರುವ ಸಾಧ್ಯತೆಯಿರುವುದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಎರಡು ದಿನವಾದರೂ ಮಹಿಳೆ ಪತ್ತೆಯಾಗದ ಹಿನ್ನೆಲೆ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ABOUT THE AUTHOR

...view details