ETV Bharat Karnataka

ಕರ್ನಾಟಕ

karnataka

ETV Bharat / state

ಅಣ್ಣನ ಕೊಲೆಗೆ ರಿವೇಂಜ್ ತೀರಿಸಿಕೊಂಡ ತಮ್ಮ: ಕೋರ್ಟ್ ಕಲಾಪ ಮುಗಿಸಿಕೊಂಡು ಬರುತ್ತಿದ್ದ ಮಹಿಳೆ ಮರ್ಡರ್ - Gadaga shahara police station

ಕೋರ್ಟ್ ಕಲಾಪ ಮುಗಿಸಿಕೊಂಡು ಆಟೋ ಏರಿ ಮಧ್ಯಾಹ್ನ 3:30 ರ ಸುಮಾರಿಗೆ ಗದಗ ನಗರದ ಎಸ್ ಬಿ ಬೇಕರಿ ಬಳಿ ಬಂದ ಮಹಿಳೆಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಶೋಭಾ ಲಮಾಣಿ ಅಲಿಯಾಸ್ ಮಿನಾಜ್ ಬೇಪಾರಿ
ಶೋಭಾ ಲಮಾಣಿ ಅಲಿಯಾಸ್ ಮಿನಾಜ್ ಬೇಪಾರಿ
author img

By

Published : Oct 3, 2022, 9:53 PM IST

Updated : Oct 3, 2022, 10:12 PM IST

ಗದಗ: ನಗರದ ಮುಳಗುಂದ ನಾಕಾ ಬಳಿಯ ಎಸ್ ಬಿ ಬೇಕರಿ ಎದುರು ಮಹಿಳೆಯ ಕೊಲೆ ನಡೆದಿದ್ದು, ಗದಗ ಬೆಟಗೇರಿ ಜನರು ಬೆಚ್ಚಿಬೀಳುವಂತಾಗಿದೆ. ನಗರದ ಗಂಗಿಮಡಿ ಬಡಾವಣೆ ನಿವಾಸಿಯಾಗಿದ್ದ ಶೋಭಾ ಲಮಾಣಿ ಅಲಿಯಾಸ್ ಮಿನಾಜ್ ಬೇಪಾರಿ ಕೊಲೆಯಾದ ಮಹಿಳೆ. ಹಳೆಯ ದ್ವೇಷದ ಹಿನ್ನೆಲೆ ಚೇತನ್ ಕುಮಾರ್ ಹಾಗೂ ರೋಹನ್ ಕುಮಾರ್ ಹತ್ಯೆ ಮಾಡಿದ್ದಾರೆ ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ಕೋರ್ಟ್ ಕಲಾಪ ಮುಗಿಸಿಕೊಂಡು ಬರುತ್ತಿದ್ದ ಮಹಿಳೆ ಮರ್ಡರ್

ಕೋರ್ಟ್ ಕಲಾಪ ಮುಗಿಸಿಕೊಂಡು ಆಟೋ ಏರಿ ಮಧ್ಯಾಹ್ನ 3:30 ರ ಸುಮಾರು ನಗರದ ಎಸ್ ಬಿ ಬೇಕರಿ ಬಳಿ ಬಂದಾಕೆಯ ಕತ್ತು ಸೀಳಿ ಕೊಲೆ ನಡೆದಿದೆ. ಮಗುವಿಗಾಗಿ ಬೇಕರಿ ತಿನಿಸು ಖರೀದಿಸಲು ಶೋಭಾ ಬೇಕರಿಗೆ ಬಂದಿದ್ದಳು. ಅಲ್ಲೇ ಕಾಯ್ದು ಕುಳಿತಿದ್ದ ಇಬ್ಬರು ಚಾಕುವಿನಿಂದ ಕತ್ತು ಸೀಳಿಸಿದ್ದಾರೆ. ಪ್ರತಿರೋಧವೊಡ್ಡಿದಾಗ ಕೈಗೆ ಚೂರಿ ಏಟು ಬಿದ್ದ ಗಾಯಗಳಾಗಿವೆ. ಸದ್ಯ ಘಟನೆ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಅಣ್ಣನ ಹತ್ಯೆಗೆ ಪ್ರತಿಕಾರವಾಗಿ ನಡೆದ ಹತ್ಯೆ:ಗದಗ ನಗರದ ಗಂಗಿಮಡಿಯಲ್ಲಿ 2020 ರಲ್ಲಿ ರಮೇಶ್ ಕುಮಾರ್ ಎಂಬಾತನ ಕೊಲೆ ನಡೆದಿದ್ದು. ಕೊಲೆ ಕೇಸ್ ವಿಚಾರವಾಗಿ ಶೋಭಾ ಅಲಿಯಾಸ್ ಮಿನಾಜ್ ಹಾಗೂ ಗಂಡ ವಾಸೀಂ ಬೇಪಾರಿ ಈ ಕೊಲೆಯಲ್ಲಿ ಭಾಗಿಯಾಗಿದ್ರು.

ಕಳೆದ ಕೆಲ ದಿನಗಳ ಹಿಂದೆ ಬೇಲ್ ಮೇಲೆ ಇಬ್ಬರು ಆಚೆ ಬಂದಿದ್ರು. ಬೇಲ್ ಆದ ನಂತರ ಇಬ್ಬರು ಹುಬ್ಬಳ್ಳಿಯಲ್ಲಿ ವಾಸವಿದ್ರು. ಕೋರ್ಟ್ ಕಲಾಪ ಇದ್ದಾಗ ಗದಗ ನಗರಕ್ಕೆ ಭೇಟಿ ಕೊಡ್ತಿದ್ರು. ಇಂದು ಕೇಸ್ ವಿಚಾರಕ್ಕೆ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಶೋಭಾ ಬಂದಿದ್ದರು ಎನ್ನಲಾಗಿದೆ‌‌.

ಇದೇ ವೇಳೆಗೆ ಕಾಯುತ್ತಿದ್ದ ಚೇತನ್ ಕುಮಾರ್, ರೋಹನ್ ಕುಮಾರ್ ಹತ್ಯೆ ಮಾಡಿದ್ದಾರೆ. 2020 ರಮೇಶ್ ಕೊಲೆ ಹಿನ್ನೆಲೆ ಜೊತೆಗೆ ಕೇಸ್ ಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ.‌

ಓದಿ:ನೆಟ್ಟಿಗರಿಂದ ವೈರಲ್ ಆದ​ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ ಕಚೇರಿ: ಮೃತ ಮಗುವಿನ ಶರೀರ ಸಾಗಿಸಲು ನೆರವಾದ ಜಿಲ್ಲಾಸ್ಪತ್ರೆ

Last Updated : Oct 3, 2022, 10:12 PM IST

ABOUT THE AUTHOR

...view details