ಕರ್ನಾಟಕ

karnataka

ETV Bharat / state

ಆ್ಯಂಬುಲೆನ್ಸ್​​ನಲ್ಲೇ ಹೆರಿಗೆ ಮಾಡಿಸಿದ 108 ಚಾಲಕ: ಆಸ್ಪತ್ರೆಗೆ ಹೋದಾಗ ಮಾನವೀಯತೆ ಮರೆತ ಸಿಬ್ಬಂದಿ - ಆ್ಯಂಬುಲೆನ್ಸ್​​ನಲ್ಲಿಯೇ ಹೆರಿಗೆ

ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ 108 ಚಾಲಕ ಯಶಸ್ವಿ ಹೆರಿಗೆ ಮಾಡಿಸಿ ತಾಯಿ ಮಗುವನ್ನು ರಕ್ಷಿಸಿದ್ದಾನೆ. ಆದ್ರೆ ಆಸ್ಪತ್ರೆಗೆ ಹೋದಾಗ ರಕ್ತಸ್ರಾವವಾಗುತ್ತಿದ್ದ ಗರ್ಭಿಣಿಗೆ ವ್ಹೀಲ್ ಚೇರ್ ಆಗಲಿ, ಸ್ಟ್ರೆಚರ್​ ಆಗಲಿ ನೀಡದೇ ಆಸ್ಪತ್ರೆಯ ಸಿಬ್ಬಂದಿ ನಡೆಸಿಕೊಂಡು ಕರೆದುಕೊಂಡು ಹೋಗುವ ಮೂಲಕ ಮಾವನೀಯತೆ ಮರೆತಿದ್ದಾರೆ.

women-gave-birth-in-ambulance-at-gadag
ಅಂಬ್ಯಲೆನ್ಸ್​​ನಲ್ಲಿಯೇ ಹೆರಿಗೆ

By

Published : Jul 9, 2020, 5:38 PM IST

ಗದಗ: ಸ್ಟಾಫ್ ನರ್ಸ್ ಇಲ್ಲದಿದ್ದರೂ ಸಹ ಆ್ಯಂಬುಲೆನ್ಸ್​ ಚಾಲಕನೋರ್ವ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಗೆ ಮಾರ್ಗ ಮಧ್ಯೆ ವಾಹನದಲ್ಲಿಯೇ ಹೆರಿಗೆ ಮಾಡಿಸಿ 2 ಜೀವ ಉಳಿಸಿರುವ ಘಟನೆ ಜಿಲ್ಲೆಯ ಅಡವಿ ಸೋಮಾಪೂರ ಬಳಿ ನಡೆದಿದೆ.

ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ಸೇರಿದ 108 ವಾಹನದಲ್ಲಿ ಚಾಲಕ ಮಹೇಶ್​ ಮಾರನಬಸರಿ ಅವರು ಕರೆದೊಯ್ಯುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಗ ಮಾರ್ಗಮಧ್ಯೆ ವಾಹನ ನಿಲ್ಲಿಸಿದ ಚಾಲಕ ಆಕೆಗೆ ಹೆರಿಗೆ ಮಾಡಿಸುವ ಮೂಲಕ ತಾಯಿ ಮಗುವಿನ ಜೀವ ಉಳಿಸಿದರು.

ಆ್ಯಂಬುಲೆನ್ಸ್​ನಲ್ಲೇ ಹೆರಿಗೆ ಮಾಡಿಸಿ, ತಾಯಿ-ಮಗುವಿನ ಪ್ರಾಣ ಉಳಿಸಿದ ಚಾಲಕ

ರಕ್ತಸ್ರಾವದ ಮಧ್ಯೆ ನಡೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಾದ ಮಹಿಳೆ:

ಅಡವಿಸೋಮಾಪುರ ತಾಂಡದ ನಿವಾಸಿ ಸೋಮವ್ವ ಲಮಾಣಿ ಮಗುವಿಗೆ ಜನ್ಮ ನೀಡಿದವಳು.ಹೆರಿಗೆ ಮಾಡಿಸಿದ ಬಳಿಕ ಮಹಿಳೆಯನ್ನು ಆ್ಯಂಬುಲೆನ್ಸ್​​ ಚಾಲಕ ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದ್ರೆ ಅಲ್ಲಿನ ಸಿಬ್ಬಂದಿಯು ಬಾಣಂತಿ ಆ್ಯಂಬುಲೆನ್ಸ್​ ಇಳಿದು ಕಾಲ್ನಡಿಗೆಯಲ್ಲೇ ಬಂದರೂ ವ್ಹೀಲ್ ಚೇರ್ ಆಗಲಿ, ಸ್ಟ್ರೆಚರ್​ನ್ನಾಗಲಿ ತರದೆ ನಡೆಸಿಕೊಂಡು ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮರೆತಿದ್ದಾರೆ. ಆದ್ರೆ ರಕ್ತ ಸ್ರಾವವಾಗುತ್ತಿದ್ದರೂ ವಾಹನದಿಂದ ನಡೆಸಿಕೊಂಡು ಹೋಗಿರುವುದಕ್ಕೆ ಮಹಿಳೆಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದುಕಡೆ ಆ್ಯಂಬುಲೆನ್ಸ್​ ಚಾಲಕ ಮಾನವೀಯತೆ ಮೆರೆದ್ರೆ, ಆಸ್ಪತ್ರೆಯ ಸಿಬ್ಬಂದಿ ಅದನ್ನು ಮರೆತವರಂತೆ ವರ್ತಿಸಿದ್ದಾರೆ. ಸದ್ಯ ತಾಯಿ ಮತ್ತು ನವಜಾತ ಶಿಶು ಆರೋಗ್ಯವಾಗಿದ್ದಾರೆ.

ABOUT THE AUTHOR

...view details