ಗದಗ:ಕ್ಷುಲ್ಲಕ ಕಾರಣಕ್ಕೆ 2 ತಿಂಗಳ ಹಸುಗೂಸು ಬಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಬಾಣಂತಿಯೋರ್ವಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಕಾಶಿ ವಿಶ್ವನಾಥ್ ನಗರದ ನಿವಾಸಿ ಪೂಜಾ ಕುನಸಿ (23) ಮೃತರು.
ಸೋಮವಾರ ಮನೆಯರೆಲ್ಲ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರಂತೆ. ಈ ವೇಳೆ ಮನೆಯಲ್ಲಿ ಓರ್ವ ಅಜ್ಜಿ ಮತ್ತು ಬಾಣಂತಿ ಮಾತ್ರ ಇದ್ದರು. ಇದ್ದಕ್ಕಿದ್ದಂತೆ ಈಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ತಕ್ಷಣ ಅಕ್ಕಪಕ್ಕದ ಮನೆಯವರು ನೇಣುಬಿಗಿದ ಸ್ಥಿತಿಯಲ್ಲಿದ್ದ ಆಕೆಯನ್ನ ರಕ್ಷಣೆ ಮಾಡಿದ್ದರು. ಬಳಿಕ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.