ಗದಗ: ನವಿಲುತೀರ್ಥ ಜಲಾಶಯದಿಂದ ಮತ್ತೆ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಲಖಮಾಪುರ ಸಂತ್ರಸ್ತರ ಗುಡಿಸಲುಗಳಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.
'ನಿಮ್ನಾ ನಂಬೀವಿ, ನಿಮ್ ಬೆನ್ನು ಹಿಂದೆ ಬಿದ್ದೀವಿ, ನಮ್ನಾ ಕೈ ಬಿಡಬ್ಯಾಡ್ರಿ'.. ಸಚಿವ ಪಾಟೀಲ್ ಕಾಲಿಗೆರಗಿದ ನೆರೆ ಸಂತ್ರಸ್ತೆ
ಸಚಿವರು ಲಖಮಾಪುರಕ್ಕೆ ಬರುತ್ತಿದ್ದಂತೆ ಪ್ರವಾಹದಿಂದ ನೊಂದ ಓರ್ವ ಮಹಿಳೆ, ಸಚಿವರ ಕಾಲಿಗೆ ಬಿದ್ದು ತನ್ನ ಕಷ್ಟವನ್ನು ಹೇಳಿಕೊಂಡಿದಾಳೆ. ಸಚಿವರನ್ನ ತಬ್ಬಿಕೊಂಡು ಕಣ್ಣೀರು ಸುರಿಸೋ ಮೂಲಕ ಸಂತ್ರಸ್ತ ಮಹಿಳೆ ತನಗಾದ ನೋವನ್ನ ಸಚಿವರ ಮಡಿಲಿಗೆ ಹಾಕಿದ್ದಾಳೆ.
ಸಚಿವರು ಬರುತ್ತಿದ್ದಂತೆ ಪ್ರವಾಹದಿಂದ ಬಳಲಿದ ಓರ್ವ ಮಹಿಳೆ, ಸಚಿವರ ಕಾಲಿಗೆ ಬಿದ್ದು ತನ್ನ ಕಷ್ಟವನ್ನು ಹೇಳಿಕೊಂಡಿದಾಳೆ. ಸಚಿವರನ್ನ ತಬ್ಬಿಕೊಂಡು ಕಣ್ಣೀರು ಸುರಿಸೋ ಮೂಲಕ ಸಂತ್ರಸ್ತ ಮಹಿಳೆ ತನಗಾದ ನೋವನ್ನ ಸಚಿವರ ಮಡಿಲಿಗೆ ಹಾಕಿದ್ದಾಳೆ.
ಈ ವೇಳೆ ಸಚಿವ ಸಿ ಸಿ ಪಾಟೀಲ್, ವೃದ್ಧ ಸಂತ್ರಸ್ತೆಯನ್ನು ಸಮಾಧಾನ ಮಾಡಿ, ಏನೂ ಚಿಂತೆ ಮಾಡಬೇಡ ತಾಯಿ,ಎರಡು ದಿನದಲ್ಲಿ ಶೆಡ್ ಹಾಕಿ ಕೊಡೋ ಮೂಲಕ ನಿಮ್ಮ ಯಾವುದೇ ಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ ಅಂತಾ ಭರವಸೆ ನೀಡಿದರು. ಇದಕ್ಕೆ ಪ್ರತಿಯಾಗಿ ಸಂತ್ರಸ್ತೆ, 'ನಿಮ್ನಾ ನಂಬೀವಿ, ನಿಮ್ ಬೆನ್ನು ಹಿಂದೆ ಬಿದ್ದೀವಿ, ನಮ್ನಾ ಕೈ ಬಿಡಬ್ಯಾಡ್ರೀ' ಅಂತಾ ಪುನಾ ಕಣ್ಣೀರಿಟ್ಟಿದ್ದಾಳೆ.