ಕರ್ನಾಟಕ

karnataka

ETV Bharat / state

ಕುರಿಗಳ ಮೇಲೆ ತೋಳಗಳ ದಾಳಿ: 10ಕ್ಕೂ ಹೆಚ್ಚು ಸಸಾವು...

ಕುರಿಗಳ ಮೇಲೆ ತೋಳಗಳು ದಾಳಿ ಮಾಡಿದ ಪರಿಣಾಮ ಹತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ‌ ತಾಲೂಕಿನ ಬಟ್ಟೂರು ಗ್ರಾಮದ ಬಳಿ ನಡೆದಿದೆ.

ಕುರಿ ಮಂದೆ ಮೇಲೆ ತೋಳಗಳ ದಾಳಿ: 10ಕ್ಕೂ ಹೆಚ್ಚು ಕುರಿಗಳು ಸಾವು...

By

Published : Oct 14, 2019, 6:24 AM IST

ಗದಗ:ಕುರಿಗಳ ಮೇಲೆ ತೋಳಗಳು ದಾಳಿ ಮಾಡಿದ ಪರಿಣಾಮ ಹತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ‌ ತಾಲೂಕಿನ ಬಟ್ಟೂರು ಗ್ರಾಮದ ಬಳಿ ನಡೆದಿದೆ.

ಸಾವಿಗೀಡಾದ ಕುರಿಗಳು ಮಾಡಳೆಪ್ಪ ಯಲ್ಲಪ್ಪ ಕರಿಗಾರ ಎಂಬಾತನಿಗೆ ಸೇರಿದವುಗಳಾಗಿದ್ದವು. ಕುರಿಗಾಯಿಗಳು ಅಕ್ಕಿಗುಂದ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯದ ಜಮೀನೊಂದರಲ್ಲಿ ಕುರಿಗಳೊಂದಿಗೆ ಬೀಡುಬಿಟ್ಟಿದ್ದರು. ಆದರೆ, ಕಳೆದ ರಾತ್ರಿ ತೋಳಗಳು ದಾಳಿ ನಡೆಸಿ ಕುರಿಗಳನ್ನು ಬಲಿ ತೆಗೆದುಕೊಂಡಿದ್ದು, ಕುರಿಗಾಯಿಗೆ ನಷ್ಟವಾಗಿದೆ.

ABOUT THE AUTHOR

...view details