ಕರ್ನಾಟಕ

karnataka

ETV Bharat / state

ಗದಗ: ಬಾಲಕಿ, ಜಾನುವಾರುಗಳ ಮೇಲೆ ತೋಳ ದಾಳಿ - ಈಟಿವಿ ಭಾರತ ಕನ್ನಡ

ಎಂಟು ವರ್ಷದ ಬಾಲಕಿ, ಆಕಳು ಹಾಗು ನಾಯಿ ಮೇಲೆ ತೋಳ ದಾಳಿ ನಡೆಸಿದೆ.

Wolf attacked
ತೋಳ ದಾಳಿ

By

Published : Jan 16, 2023, 8:09 AM IST

ಗದಗ: ಆಹಾರ ಅರಸಿ ಬಂದ ತೋಳವೊಂದು ಗ್ರಾಮಕ್ಕೆ ನುಗ್ಗಿ ಬಾಲಕಿ‌ ಹಾಗೂ ಜಾನುವಾರಗಳ ಮೇಲೆ ದಾಳಿ ನಡೆಸಿರುವ ಘಟನೆ ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ನಡೆದಿದೆ. ರಸ್ತೆ ಬದಿ ಕಟ್ಟಿದ್ದ ಆಕಳು ಕರು ಮತ್ತು ನಾಯಿಯ ಮೇಲೆರಗಿ ಅವುಗಳನ್ನು ಗಾಯಗೊಳಿಸಿದೆ. ತೋಳವನ್ನು ಹಿಡಿಯಲು ಗ್ರಾಮಸ್ಥರು ಪ್ರಯತ್ನಿಸಿದ್ದು, ಕೈಗೆ ಸಿಗದೆ ಪರಾರಿಯಾಗಿದೆ.

ಸದ್ಯಕ್ಕೆ ಕುರ್ತಕೋಟಿ ಗ್ರಾಮದಿಂದ ನೀಲಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದಾರಿಯ ಕಡೆ ಹೋಗಿ ಹಳ್ಳದ ಬಳಿ ಕಣ್ಮರೆಯಾಗಿದೆ. ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ತೋಳದಿಂದ ಗಾಯಗೊಂಡ ಬಾಲಕಿಯನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ದುಬಾರೆ ಆನೆ ಶಿಬಿರದ ಮೇಲೆ ಕಾಡಾನೆ ದಾಳಿ.. ಸಾಕಾನೆ ಗೋಪಿಗೆ ಗಾಯ.. ಪ್ರವಾಸಿಗರಿಗೆ ನಿಷೇಧ

ಚಿರತೆ ಬೋನಿಗೆ:ಕಳೆದ ನಾಲ್ಕೈದು ದಿನಗಳಿಂದ ಕುಷ್ಠಗಿ ತಾಲೂಕಿನ ಕನ್ನಾಳ ಗುಡ್ಡದ ಪ್ರದೇಶದಲ್ಲಿ ಚಿರತೆ ಕಂಡುಬಂದಿತ್ತು. ಇದರಿಂದ ಜನರು ಆತಂಕಕ್ಕೀಡಾಗಿದ್ದರು. ಅಲ್ಲದೇ ಗುಡ್ಡ ಬಿಟ್ಟು ಚಿರತೆ ಕೆಳಗೆ ಬಂದಿರಲಿಲ್ಲ. ಆದರೆ ಶನಿವಾರ ರಾತ್ರಿ ಆಹಾರಕ್ಕೆಂದು ಕೆಳಗೆ ಬಂದಿದ್ದು, ನಾಲ್ಕು ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.

ಕಾಡಾನೆ ದಾಳಿ: ಜಮೀನಿನಲ್ಲಿ ಕೆಲಸ ಮಾಡುವಾಗ ಕಾಡಾನೆ ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿತ್ತು. ರೈತ ದೇವರಾಜ್​ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರದೇಶದಲ್ಲಿ ಸತತವಾಗಿ ಕಾಡಾನೆ ದಾಳಿ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇದನ್ನೂ ಓದಿ:30 ಜನ ಪ್ರಯಾಣಿಕರಿದ್ದ ಬಸ್​ ಮೇಲೆ ಕಾಡಾನೆ ದಾಳಿ.. ಬಸ್​ ಗಾಜು ಪುಡಿಪುಡಿ.. ವಿಡಿಯೋ ವೈರಲ್​

ABOUT THE AUTHOR

...view details