ಗದಗ:ಗಾಳಿ ವಿದ್ಯುತ್ (ವಿಂಡ್ ಫ್ಯಾನ್) ಯಂತ್ರದ ಸುತ್ತಮುತ್ತ ನೀವು ವಾಸ ಮಾಡ್ತಿದ್ರೆ ಎಚ್ಚರವಿರಿ, ಯಾಕಂದ್ರೆ ಯಾವ್ ಟೈಮ್ನಲ್ಲಿ ಬೇಕಾದ್ರೂ ವಿಂಡ್ ಪವರ್ ಫ್ಯಾನ್ ರೆಕ್ಕೆಗಳು ನಿಮ್ಮ ಮನೆ ಮೇಲೆ ಬೀಳಬಹುದು.
ಶಾಕಿಂಗ್ ವಿಡಿಯೋ: ಕಪ್ಪತಗುಡ್ಡದಲ್ಲಿ ಗಾಳಿ ಬಿರುಸಿಗೆ ಮುಗಿಲೆತ್ತರಕ್ಕೆ ಹಾರಿದ ವಿಂಡ್ ಮಿಲ್ ರೆಕ್ಕೆ - kannadanews
ಗಾಳಿಯ ವೇಗಕ್ಕೆ ವಿಂಡ್ಮಿಲ್ನ ರೆಕ್ಕೆಗಳು ಮುರಿದು ಮುಗಿಲೆತ್ತರಕ್ಕೆ ಹಾರಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಪತ್ತಗುಡ್ಡದಲ್ಲಿ ನಡೆದಿದೆ.
ವಿಂಡ್ ಮಿಲ್ನ ರೆಕ್ಕೆಯೊಂದು ಕಳಚಿ ಕೆಳಗೆ ಹಾರಿ ಬಿದ್ದಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಪತ್ತಗುಡ್ಡದಲ್ಲಿ ನಡೆದಿದೆ.ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಹಾಗೂ ಮುರಡಿ ಗ್ರಾಮಗಳ ನಡುವೆ ಈ ಘಟನೆ ಸಂಭವಿಸಿರುವಂಥದ್ದು. ಕಪ್ಪತ್ತಗುಡ್ಡದಲ್ಲಿರೋ ಸುಜಲಾನ್ ಕಂಪನಿ ಒಡೆತನದ ವಿಂಡ್ ಫ್ಯಾನ್ಗಳು ಜೋರಾದ ಗಾಳಿಗೆ ಹಾರಿ ಬಿದ್ದಿವೆ. ಗುಡ್ಡದ ಸುತ್ತಲೂ ಇರೋ ಜಮೀನುಗಳಲ್ಲಿ ರೈತರು ಕೃಷಿ ಕಾರ್ಯ ನಡೆಸುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ರೆಕ್ಕೆಗಳು ಜಮೀನಿನಲ್ಲಿ ಬಿದ್ದಿಲ್ಲ. ಇನ್ನೂ ಆಕಾಶದೆತ್ತರಕ್ಕೆ ಫ್ಯಾನ್ ರೆಕ್ಕೆಗಳು ಹಾರಿ ಬೀಳುವ ವಿಡಿಯೋ ಕೂಡ ವೈರಲ್ ಆಗಿದೆ.