ಗದಗ: ಜಿಲ್ಲೆಯ ಹಲವೆಡೆ ತಡರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ವರುಣನ ಆರ್ಭಟಕ್ಕೆ ಬಿಳಿ ಜೋಳ, ಕಡಲೆ, ಗೋಧಿ, ಹತ್ತಿ ಬೆಳೆಗಳು ನೆಲಕ್ಕುರುಳಿ ನಾಶವಾಗಿವೆ.
ಕೆಲವು ಬೆಳೆ ಕಟಾವಿಗೆ ಬಂದಿದ್ದು, ಇನ್ನು ಕೆಲವು ಬೆಳೆ, ಕಾಳು ಕಚ್ಚುವ ಸಂದರ್ಭದಲ್ಲಿ ಜಮೀನಿನಲ್ಲಿ ನೀರು ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬಸವರಾಜ್ ಮೆಣಸಿನಕಾಯಿ ಎನ್ನುವ ರೈತ, ನಾಲ್ಕು ಎಕರೆಯಲ್ಲಿ ಬೆಳೆಯಲಾಗಿದ್ದ ಬಿಳಿ ಜೋಳ ಮಳೆ ಗಾಳಿಗೆ ನೆಲಕ್ಕುರುಳಿದ್ದು, ಕಣ್ಣೀರು ಹಾಕ್ತಿದ್ದಾರೆ.