ಗದಗ : ನೀವು ಇಷ್ಟು ದಿನಗಳ ಕಾಲ ಎಲ್ಲಿಯೂ ನೋಡಿರದಂತಹ ಲಗ್ನ ಪತ್ರಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮತದಾರನೇ ಮಧುಮಗ, ಪ್ರಜಾಪ್ರಭುತ್ವವೇ ವಧು... ಹೀಗೊಂದು ವಿಶಿಷ್ಟ ಕರೆಯೋಲೆ
ಚುನಾವಣೆ ಸಂದರ್ಭದಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಮಧ್ಯೆ ವಿಶಿಷ್ಟ ರೀತಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆಯೊಂದು ಸಖತ್ ವೈರಲ್ ಆಗಿದೆ. ಅದು ಹೇಗಿದೆ ಅನ್ನೋದನ್ನು ಇಲ್ಲಿ ವಿವರಿಸಲಾಗಿದೆ.
ವಿಶಿಷ್ಟ ಹಾಗೂ ವಿಶೇಷ ರೀತಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ
ಹೌದು, ಲಗ್ನ ಪತ್ರಿಕೆಯಲ್ಲಿ ಮತದಾರನನ್ನು ಮಧುಮಗನನ್ನಾಗಿ ಪ್ರಜಾಪ್ರಭುತ್ವವನ್ನ ವಧುವನ್ನಾಗಿ ಮುದ್ರಿಸಲಾಗಿದೆ. ಇನ್ನು ಮತ ಚಲಾಯಿಸುವ ಮೂಲಕ ಇವರಿಗೆ ಆಶೀರ್ವದಿಸಬೇಕು ಅಂತಾ ಕೋರಿರುವ ಆಯೋಗ, ಮದುವೆಗೆ ಬಂದವರಿಗೆ ಹೆಂಡ, ಹಣ, ಉಡುಗೊರೆ ಸೇರಿದಂತೆ ಯಾವುದನ್ನು ನೀಡಲಾಗುವುದಿಲ್ಲ ಅನ್ನೋದನ್ನು ತಿಳಿಸಿದೆ. ವಿಶೇಷ ಅಂದ್ರೆ ಶೇ. ನೂರರಷ್ಟು ಮತದಾನ ಆಗಲೇಬೇಕು ಅನ್ನೋ ದೃಷ್ಠಿಯಿಂದ ಪ್ರಕಟಗೊಂಡಿರುವ ಈ ಲಗ್ನ ಪತ್ರಿಕೆ ಇದೀಗ ಗಮನ ಸೆಳೆಯುತ್ತಿದೆ. ಭಾರತೀಯ ಚುನಾವಣಾ ಆಯೋಗ ನಿಶ್ಚಯಿಸಿದಂತೆ ಈ ಲಗ್ನ ಪತ್ರಿಕೆಯನ್ನು ಮುದ್ರಿಸಲಾಗಿದೆ.