ಕರ್ನಾಟಕ

karnataka

ETV Bharat / state

ಕೆಲಸದಿಂದ ವಜಾಗೊಂಡಿದ್ದ ವಾಟರ್​​ಮೆನ್ ಮನನೊಂದು ಗ್ರಾಪಂ ಅಧ್ಯಕ್ಷರ ಕೊಠಡಿಯಲ್ಲೇ ಆತ್ಮಹತ್ಯೆಗೆ ಶರಣು - ವಾಟರ್​ಮೆನ್​ ಆತ್ಮಹತ್ಯೆ

ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಪ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ..

waterman-commits-suicide-after-he-dismissed-from-his-job
ಕೆಲದಿಂದ ವಜಾಗೊಂಡಿದ್ದ ವಾಟರ್​​ಮೆನ್ ಮನನೊಂದು ಗ್ರಾಪಂಯಲ್ಲೇ ಆತ್ಮಹತ್ಯೆ

By

Published : Sep 29, 2021, 3:12 PM IST

ಗದಗ : ಕರ್ತವ್ಯಲೋಪ ಎಸಗಿದ ಆರೋಪ ಹಿನ್ನೆಲೆ ಕೆಲಸದಿಂದ ವಜಾ ಮಾಡಿದ್ದರಿಂದ ಮನನೊಂದ ವಾಟರ್​​ಮೆನ್​ ಗ್ರಾಮ ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ವಾಟರ್​​ಮೆನ್ ಆಗಿದ್ದ ಮಲ್ಲಪ್ಪ ಹೊಳಗುಂದಿ (31) ಎಂಬುವರು ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್‌ನಲ್ಲಿ ವಾಟರ್‌ಮೆನ್ ಆಗಿದ್ದ ಮಲ್ಲಪ್ಪನ ಮೇಲೆ ಸರಿಯಾಗಿ ಕೆಲಸ ಮಾಡುತ್ತಿಲ್ಲಾ ಎಂಬ ‌ಆರೋಪ ಹೊರಿಸಿ ಪಂಚಾಯತ್ ಅಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿತ್ತು.

ಇದರಿಂದ ಮನನೊಂದ ಮಲ್ಲಪ್ಪ ನಿನ್ನೆ ರಾತ್ರಿ ಗ್ರಾಮ ಪಂಚಾಯತ್‌ ಅಧ್ಯಕ್ಷರ ಕೊಠಡಿಯ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಲ್ಲಪ್ಪನ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದರು.

ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಪ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಓದಿ:ಮೈಸೂರು: ಸೊಸೆಗೆ ಚಾಕು ಚುಚ್ಚಿದ ಅತ್ತೆ.. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ABOUT THE AUTHOR

...view details