ಕರ್ನಾಟಕ

karnataka

ETV Bharat / state

ಇಂದಿನ 58 ಜನ ಸೇರಿ ಗದಗದಲ್ಲಿ ಈವರೆಗೆ 1152 ಜನರ ಮೇಲೆ ನಿಗಾ : ಡಿಸಿ

ಗದಗ ಜಿಲ್ಲೆಯಲ್ಲಿ ಇಂದಿನ 58 ಜನರನ್ನು ಸೇರಿಸಿ, ಒಟ್ಟು 117 ಜನರ ವರದಿಗಳು ಬರುವುದು ಬಾಕಿ ಇವೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ತಿಳಿಸಿದ್ದಾರೆ.

D C  G. Hiremath
ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ

By

Published : Apr 29, 2020, 9:39 PM IST

ಗದಗ:ಜಿಲ್ಲೆಯಲ್ಲಿ ಇಂದು ಹೊಸದಾಗಿ 58 ಜನ ಸೇರಿ ಒಟ್ಟು 1152 ಜನರ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 28 ದಿನಗಳ ನಿಗಾ ಅವಧಿ ಪೂರೈಸಿದವರು 216 ಜನ. ಮನೆಯಲ್ಲಿಯೇ ಪ್ರತ್ಯೇಕವಾಗಿ ನಿಗಾದಲ್ಲಿರುವವರು 913 ಜನ.‌ ಆಸ್ಪತ್ರೆ ಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು ಒಟ್ಟು 22‌ ಜನ. ಇನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಮಾದರಿಗಳು ಒಟ್ಟು 1133. ಇದರಲ್ಲಿ 959 ನೆಗಟಿವ್ ಬಂದಿದ್ದು, 52 ವರದಿಗಳು ತಿರಸ್ಕೃತಗೊಂಡಿವೆ. ಇನ್ನು ಇಂದಿನ 58 ಜನರ ಸೇರಿಸಿ ಒಟ್ಟು 117 ಜನರ ವರದಿಗಳು ಬರುವುದು ಬಾಕಿ ಇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ಪಿ-166 , ಪಿ-304, ಪಿ-370, ಪಿ-396, ಪಿ-514 ಒಟ್ಟು 5 ಕೊವಿಡ್-19 ಪ್ರಕರಣಗಳು ಎಂದು ಧೃಢಪಟ್ಟಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details