ಗದಗ: ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ನೋಡಿದರೆ ಇದು ವಸತಿ ನಿಲಯವೋ ಇಲ್ಲ ಆರ್ಟ್ ಗ್ಯಾಲರಿನೋ ಅಂತಾ ಅನಿಸಿಬಿಡುತ್ತೆ. ಹಾಸ್ಟೆಲ್ ಅನ್ನು ಅಷ್ಟು ಸುಂದರವಾಗಿಸಿದ್ದು, ಸ್ವಚ್ಛವಾಗಿಡಲಾಗಿದೆ.
ಮಕ್ಕಳ ಆಕರ್ಷಣೆಗೆ, ವಿದ್ಯಾಭ್ಯಾಸಕ್ಕೆ ಹೇಳಿ ಮಾಡಿಸಿದ ವಸತಿ ನಿಲಯವಿದು. ಈ ವಸತಿ ನಿಲಯ ಇಷ್ಟೊಂದು ಅಚ್ಚುಕಟ್ಟಾಗಿರಲು ವಾರ್ಡನ್ ದೀಪಾ ಶೆಟ್ಟರ್ ಪ್ರಮುಖ ಕಾರಣ. ಇದಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಸಹಕಾರವೂ ಲಭಿಸಿದೆಯಂತೆ.
ಸರ್ಕಾರಿ ವಸತಿ ನಿಲಯಕ್ಕೆ ಸ್ವಂತ ಖರ್ಚಿನಲ್ಲಿ ಸುಂದರ ಸ್ಪರ್ಶ ನೀಡಿದ ವಾರ್ಡನ್ ವಸತಿ ಶಾಲೆಗೆ ಗುರುಕುಲದ ಸ್ವರ್ಶ:ವಸತಿ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಲ್ಲಿ ಈ ಹಿಂದಿನ ಕಾಲದಲ್ಲಿನ ಗುರುಕುಲದ ಶಿಕ್ಷಣ ಪದ್ಧತಿಯ ಸ್ಪರ್ಶ ನೀಡಲಾಗಿದ್ದು, ಪ್ರಮುಖವಾಗಿ ಪರಿಸರ ಕಾಳಜಿ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ವಸತಿ ಶಾಲೆಯಲ್ಲಿ ಹೆಚ್ಚಿನ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರಿ ವಸತಿ ನಿಲಯಕ್ಕೆ ಸ್ವಂತ ಖರ್ಚಿನಲ್ಲಿ ಸುಂದರ ಸ್ಪರ್ಶ ನೀಡಿದ ವಾರ್ಡನ್ ರಾಜ್ಯದ ಬೇರೆ ಬೇರೆ ವಸತಿ ಶಾಲೆಗಳಲ್ಲೂ ಇದೇ ರೀತಿಯ ವಸತಿ ಶಾಲೆ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಈ ವಸತಿ ನಿಲಯವನ್ನ ಉದಾಹರಣೆಯಾಗಿ ಸುಂದರ ಹಾಗೂ ಸ್ವಚ್ಛಗೊಳಿಸಲಾಗಿದ್ದು, ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಸಹ ಕೈಜೋಡಿಸಿದೆ. ಇಲ್ಲಿನ ಸಿಬ್ಬಂದಿಯೂ ವಾರ್ಡನ್ಗೆ ಎಲ್ಲ ಸಹಾಯ ಮಾಡುತ್ತಿದ್ದಾರೆ.
ಸುಮಾರು 60 ಸಾವಿರ ರೂಪಾಯಿ ಸ್ವಂತ ಹಣ ಖರ್ಚು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಈ ವಸತಿ ನಿಲಯದ ಗೋಡೆಗಳಿಗೆ ಬಣ್ಣ ಬಳಿಸಿದ್ದಾರೆ. ಇದೊಂದು ಜಾನಪದ ಸೊಗಡಿನ ಪೈಟಿಂಗ್ ಆಗಿದ್ದು, ಮಕ್ಕಳ ಆಕರ್ಷಣೆಗೆ ಹೇಳಿ ಮಾಡಿಸಿದಂತಿದೆ. ಕೇವಲ ಪೇಟಿಂಗ್ ಮಾತ್ರವಲ್ಲ, ವಸತಿ ನಿಲಯಕ್ಕೆ ಹಳ್ಳಿ ಸೊಗಡು ಹಾಗೂ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿದ್ದಾರೆ.
ತಾನು ಕೆಲಸ ಮಾಡುವ ವಸತಿ ನಿಲಯದ ಮಕ್ಕಳು ಘನತೆಯಿಂದ ಓಡಾಡಬೇಕು. ಖುಷಿಯಿಂದ ಇರಬೇಕು, ಮಕ್ಕಳಿಗೆ ಕಲಿಕಾ ಪೂರಕ ವಾತಾವರಣ ನಿರ್ಮಿಸಿಕೊಡಬೇಕು ಅನ್ನೋದು ನನ್ನ ಉದ್ದೇಶವಾಗಿತ್ತು. ಹಾಸ್ಟೆಲ್ ಸ್ವಚ್ಛತೆ ಮೊದಲ ಆದ್ಯತೆ ಆಗಿದೆ. ಇತರ ಸಿಬ್ಬಂದಿ ಹಾಗೂ ಇಲಾಖೆಯ ಸಹಕಾರದೊಂದಿಗೆ ಈ ಪೇಂಟಿಂಗ್ ಜತೆ ಹಾಸ್ಟೆಲ್ ಪರಿಶುದ್ಧವಾಗಿರುವಂತ ಪರಿಸರ ನಿರ್ಮಾಣ ಮಾಡಿಸಿದ್ದೇನೆ ಅಂತಾ ವಾರ್ಡನ್ ದೀಪಾ ಶೆಟ್ಟರ್ ತಿಳಿಸಿದ್ದಾರೆ.
ಈ ವರ್ಲಿ ಆರ್ಟ್ ಜಾನಪದ ಸೊಗಡಿನಲ್ಲಿದೆ. ಇಂದು ನಮ್ಮ ಜಾನಪದದ ಬಹುತೇಕ ಕುಲ ಕಸುಬುಗಳು, ಆಚಾರ-ವಿಚಾರ ನಶಿಸಿ ಹೋಗ್ತಿವೆ. ಹಾಗಾಗಿ, ಮಕ್ಕಳ ಕಲಿಕೆಯ ಪೂರಕವಾಗಿ ಪೇಂಟಿಂಗ್ ಮಾಡಲಾಗಿದೆ. ಸುತ್ತಲೂ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಲಾಗಿದೆ.
ಸರ್ಕಾರಿ ವಸತಿ ನಿಲಯಕ್ಕೆ ಸ್ವಂತ ಖರ್ಚಿನಲ್ಲಿ ಸುಂದರ ಸ್ಪರ್ಶ ನೀಡಿದ ವಾರ್ಡನ್ ಜೊತೆಗೆ ವಸತಿ ನಿಲಯದ ಮುಂದೆ ಸುಂದರವಾದ ಗಾರ್ಡನ್ ಕೂಡ ನಿರ್ಮಾಣ ಮಾಡಲಾಗಿದೆ. ಗಾರ್ಡನ್ನಲ್ಲಿ ಆಕರ್ಷಣೆಯ ಚೇರ್ಗಳನ್ನು ಸಹ ಇರಿಸಲಾಗಿದೆ. ಗಿಡಗಳನ್ನು ನೆಟ್ಟಿರುವ ಪಾಟ್ಗಳಿಗೂ ಸಹ ಸುಂದರವಾಗಿ ಚಿತ್ರಗಳನ್ನು ಬಿಡಿಸಿ ಆಕರ್ಷಣೀಯಗೊಳಿಸಲಾಗಿದೆ. ಮರಗಳಿಗೆ ಕೇಸರಿ- ಬಿಳಿ- ಹಸಿರು ಬಣ್ಣಗಳಿಂದ ಅಲಂಕಾರಗೊಳಿಸಲಾಗಿದೆ. ದ್ವಾರ ಬಾಗಿಲನ್ನು ಇನ್ನೂ ಅತ್ಯಾಕರ್ಷಣೆಗೊಳಿಸಲಾಗಿದೆ.
ಇದನ್ನೂ ಓದಿ:ಉಕ್ರೇನ್ನಿಂದ ವಿಜಯಪುರಕ್ಕೆ ಮರಳಿದ ಸ್ನೇಹಾ ಪಾಟೀಲ್ ಬಿಚ್ಚಿಟ್ಟರು ಅಲ್ಲಿನ ಕರಾಳತೆ..
ಇನ್ನು ಮಕ್ಕಳಿಗಾಗಿ ಪ್ರತ್ಯೇಕ ಲೈಬ್ರರಿ, ಕಂಪ್ಯೂಟರ್ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಡೈನಿಂಗ್ ಟೇಬಲ್ ಸಹ ಇದೆ. ಶಿಕ್ಷಣಕ್ಕೆ ಹಾಗೂ ಓದಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಜ್ಞಾನಾರ್ಜನೆಗೆ ಸುಸಜ್ಜಿತ ಲೈಬ್ರರಿ ಸಹ ಸಜ್ಜುಗೊಳಿಸಲಾಗಿದೆ. ಹೀಗಾಗಿ ಮಕ್ಕಳಿಗೆ ಇದೊಂದು ಶಿಕ್ಷಣದ ದೇವಸ್ಥಾನ ಎಂಬ ಭಾವನೆ ಬರುವಂತೆ ಮಾಡಲಾಗಿದೆ. ಜೊತೆಗೆ ಹಾಸ್ಟೆಲ್ನ ಮೇಲ್ವಿಚಾರಕಿಯವರು ದಿನದ 24 ಗಂಟೆ ಮಕ್ಕಳ ಕಲಿಕೆಯ ಬಗ್ಗೆ ಯೋಚಿಸ್ತಾರೆ, ಇವರು ನಮ್ಮ ತಾಯಿ ಸ್ವರೂಪ ಅಂತಾ ಕೊಂಡಾಡಿದ್ದಾರೆ.