ಗದಗ:ಜಿಲ್ಲೆಯಲ್ಲಿ 53 ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದೆ.
ಗ್ರಾ.ಪಂ ಚುನಾವಣೆ: ಗೋವಾದಿಂದ ಬಂದು ಮತ ಚಲಾಯಿದ ಕೂಲಿ ಕಾರ್ಮಿಕರು ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದ ನೂರಾರು ಕೂಲಿ ಕಾರ್ಮಿಕರು ಬಂದು ಮತ ಚಲಾಯಿಸುತ್ತಿದ್ದಾರೆ. ಗದಗ ತಾಲೂಕಿನ ಕಳಸಾಪೂರ, ನಾಗಾವಿ, ಬೆಳಧಡಿ ಗ್ರಾಮದ ಜನರು ಕೂಲಿ ಕೆಲಸಕ್ಕೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದರು. ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಬಂದು ತಮ್ಮ ಅಭ್ಯರ್ಥಿಗಳ ಹಣೆಬರಹ ಬರೆದಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಹಂತದ 53 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆದಿದೆ. 53 ಗ್ರಾ.ಪಂ ಗಳ ಒಟ್ಟು 801 ಸ್ಥಾನಗಳ ಪೈಕಿ 51 ಜನ ಸದಸ್ಯರ ಅವಿರೋಧ ಆಯ್ಕೆಯಾಗಿದೆ. 7 ಸ್ಥಾನಗಳು ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿವೆ. ಒಟ್ಟು 743 ಸ್ಥಾನಗಳಿಗೆ 2,216 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಗದಗ ತಾಲೂಕಿನ 26 ಗ್ರಾ.ಪಂಗಳ 394 ಸ್ಥಾನಗಳಿಗೆ 1189 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ 13 ಗ್ರಾ.ಪಂಗಳ 167 ಸ್ಥಾನಗಳಿಗೆ 512 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಶಿರಹಟ್ಟಿ ತಾಲೂಕಿನ 14 ಗ್ರಾ.ಪಂಗಳ 182 ಸ್ಥಾನಗಳಿಗೆ 515 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 53 ಗ್ರಾ.ಪಂಗಳ ಪೈಕಿ 481 ಮತಗಟ್ಟೆಗಳಿದ್ದು, ಸಾಮಾನ್ಯ 244, ಸೂಕ್ಷ್ಮ- 61, ಅತಿಸೂಕ್ಷ್ಮ 76 ಮತಗಟ್ಟೆ ಎಂದು ನಿರ್ಧರಿಸಲಾಗಿದೆ.