ಕರ್ನಾಟಕ

karnataka

ETV Bharat / state

ನೆರೆ ಪೀಡಿತ ಪ್ರದೇಶಕ್ಕೆ ಬಾರದ ಆ್ಯಂಬುಲೆನ್ಸ್.. ಹೃದಯಾಘಾತದಿಂದ ವೃದ್ಧೆ ಸಾವು.. ಚಿತೆ ಮುಂದೆ ಕಣ್ಣೀರಿಟ್ಟ ವ್ಯಕ್ತಿ - ಪ್ರವಾಹ ಪೀಡಿತ ಪ್ರದೇಶ

ಪ್ರವಾಹ ಪೀಡಿತ ಪ್ರದೇಶಕ್ಕೆ ಆ್ಯಂಬ್ಯುಲೆನ್ಸ್ ಬಾರದೆ ಹೃದಯಾಘಾತದಿಂದ ವೃದ್ಧೆ ಸಾವನ್ನಪ್ಪಿದ್ದು, ಚಿತೆಯ ಮುಂದೆ ನಿಂತು ಗ್ರಾಮದ ಸಮಸ್ಯೆಯನ್ನು ತೋಡಿಕೊಂಡಿರುವ ಗ್ರಾಮಸ್ಥನ ವಿಡಿಯೋ ಇದೀಗ ವೈರಲ್​ ಆಗಿದೆ.

ವೃದ್ಧೆ ಸಾವು

By

Published : Aug 30, 2019, 1:32 PM IST

ಗದಗ :ಪ್ರವಾಹ ಪೀಡಿತ ಗ್ರಾಮದಲ್ಲಿ ಸುಡುವ ಚಿತೆಯ ಮುಂದೆ ವ್ಯಕ್ತಿಯೊಬ್ಬ ನಿಂತು ಗ್ರಾಮದ ಸಮಸ್ಯೆ ತೋಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದಿದೆ.

ಸುಡುವ ಚಿತೆಯ ಮುಂದೆ ನಿಂತು ಸಮಸ್ಯೆ ತೋಡಿಕೊಂಡ..

ಗ್ರಾಮಕ್ಕೆ ರಸ್ತೆ‌ ಸಂಪರ್ಕ ಸರಿಯಾಗಿಲ್ಲದ್ದರಿಂದ ಆ್ಯಂಬುಲೆನ್ಸ್ ಬಾರದೇ ವೃದ್ಧೆ ಶೆಟ್ಟವ್ವ ಮಾದಾರ್ (65) ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರೋಣ ಕೊಣ್ಣೂರು ಸಂಪರ್ಕ ಕಲ್ಪಿಸೋ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

ಶೆಟ್ಟವ್ವಳಿಗೆ ನಿನ್ನೆ ಹೃದಯ ಸಮಸ್ಯೆ ಕಾಣಿಸಿಕೊಂಡಾಗ ಗ್ರಾಮಸ್ಥರು 108 ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಆದರೆ, ಸರಿಯಾದ ರಸ್ತೆ ಸಂಪರ್ಕವಿರದ ಕಾರಣ ಗ್ರಾಮಕ್ಕೆ ಆ್ಯಂಬುಲೆನ್ಸ್ ಬರಲಾಗಿಲ್ಲ. ಹೀಗಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದ ಕಾರಣ ಶೆಟ್ಟವ್ವ ಮೃತಪಟ್ಟಿದ್ದಾಳೆಂದು ಗ್ರಾಮಸ್ಥರು ಆರೋಪಿಸ್ತಿದ್ದಾರೆ. ಮೆಣಸಗಿ ಗ್ರಾಮವು ಗಣಿ ಮತ್ತು ಭೂವಿಜ್ಞಾನ ಇಲಾಖೆ‌ ಸಚಿವ ಸಿ ಸಿ ಪಾಟೀಲ್ ಅವರ ಕ್ಷೇತ್ರ ನರಗುಂದ ವ್ಯಾಪ್ತಿಗೆ ಬರುತ್ತದೆ. ಈಗಾಗ್ಲೇ ಸಚಿವರೂ ಸಹ ಗ್ರಾಮದ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ಸಮಸ್ಯೆ ಸರಿಪಡಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಹಾಗೂ ರಾಜಕೀಯ ನಾಯಕರಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ABOUT THE AUTHOR

...view details