ಗದಗ:ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಸ್ವಾಮೀಜಿಯವರನ್ನು ನೇಮಕ ಮಾಡಬೇಕೆಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸರು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಬಾಲೆಹೊಸರು ಸಭಾಭವನದಲ್ಲಿ ಗ್ರಾಮಸ್ಥರು ಹಾಗೂ ದಿಂಗಾಲೇಶ್ವರ ಭಕ್ತರು ಸಭೆ ನಡೆಸಿ, 2014 ರಲ್ಲಿ ಮೂರುಸಾವಿರ ಮಠದ ಭಕ್ತರು ಮಠಕ್ಕೆ ಆಗಮಿಸಿ, ದಿಂಗಾಲೇಶ್ವರ ಶ್ರೀಗಳು ಉತ್ತರಾಧಿಕಾರಿಯಾಗಬೇಕು ಎಂದು ಹಠ ಹಿಡಿದು, ಶ್ರೀಗಳನ್ನು ಒಪ್ಪಿಸಿದ್ದಾರೆ. ಹಾಗೆಯೇ ಪತ್ರವನ್ನು ಸಹ ಮಾಡಿದ್ದಾರೆ ಎಂದರು ಸಭೆಯಲ್ಲಿ ತಿಳಿಸಿದರು.