ಗದಗ:ರಾಜಕೀಯ ಅಧಿಕಾರ ಹಿಡಿದೋರು ಜನರ ಕಲ್ಯಾಣಕ್ಕಿಂತ ತಮ್ಮ ಕಲ್ಯಾಣಕ್ಕಾಗಿ ಬಡಿದಾಡೋದೆ ಹೆಚ್ಚು. ಆದರೆ ಇಲ್ಲೊಬ್ಬ ಯುವಕ ತನ್ನ ಕ್ಷೌರಿಕ ವೃತ್ತಿ ಮಾಡುತ್ತಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ತನ್ನನ್ನು ನಂಬಿ ಮತ ಹಾಕಿದವರಿಗೆ ಮೋಸ ಮಾಡದೇ, ಸರ್ಕಾರದ ಯೋಜನೆಗಳನ್ನು ತನ್ನ ಕ್ಷೇತ್ರದಲ್ಲಿರೋ ಮತದಾರರಿಗೆ ತಲುಪಿಸಿ ಜನ ಸೇವಕನಾಗಿದ್ದಾರೆ.
ಅಚ್ಚುಕಟ್ಟಾದ ಸಿಸಿ ರಸ್ತೆಗಳು, ಪ್ರತಿ ಮನೆಗಳಿಗೂ ಕುಡಿಯುವ ನೀರಿನ ನಲ್ಲಿಗಳ ಸಂಪರ್ಕ.. ಮನೆಗೊಂದು ಶೌಚಾಲಯ. ಚಿಕ್ಕ ಗ್ರಾಮವಾದರೂ ಯಾವುದೇ ಸಮಸ್ಯೆಯಿಲ್ಲದ ಚೊಕ್ಕದಾದ ಊರು... ಹೌದು, ಈ ಎಲ್ಲಾ ವ್ಯವಸ್ಥಿತ ಮೂಲ ಸೌಲಭ್ಯಗಳು ಕಂಡು ಬರೋದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತಿಪ್ಪಾಪೂರ ಅನ್ನೋ ಪುಟ್ಟ ಗ್ರಾಮದಲ್ಲಿ. ಈ ಹಿಂದೆ 2011ರ ಜನಗಣತಿ ಪ್ರಕಾರ ತಿಪ್ಪಾಪೂರ ಗ್ರಾಮ ಬೀಡನಾಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದೆ. ನಂತರ ಹಲವಾರು ಪೈಪೋಟಿಗಳ ನಡುವೆ ಅದೇ ಗ್ರಾಮದ ಕ್ಷೌರಿಕ ವೃತ್ತಿ ಮಾಡೋ ಯುವಕ ದೇವಪ್ಪ ಹಡಪದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ನಂತರ ಗ್ರಾಮಸ್ಥರ ವಿಶ್ವಾಸ, ಸಹಕಾರ ಗಳಿಸಿರುವ ದೇವಪ್ಪ ಸರ್ಕಾರ ಎಲ್ಲಾ 21 ಯೋಜನೆಗಳನ್ನು ಗ್ರಾಮದಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಿದ್ದಾರೆ.