ಗದಗ: 72 ವರ್ಷಗಳಿಂದ ವಾಲ್ಮೀಕಿ ಸಮುದಾಯವನ್ನು ಎಲ್ಲಾ ಪಕ್ಷಗಳು ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂದು ನಗರದಲ್ಲಿ ವಾಲ್ಮೀಕಿ ಶ್ರೀ ಆಕ್ರೋಶ ಹೊರ ಹಾಕಿದ್ದಾರೆ.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಸಿಎಂ ಮನೆಗೇ ನುಗ್ತೀವಿ... ಪ್ರಸನ್ನಾನಂದ ಶ್ರೀ ಎಚ್ಚರಿಕೆ - ವಾಲ್ಮೀಕಿ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ನೀಡಲೇಬೇಕು
72 ವರ್ಷಗಳಿಂದ ವಾಲ್ಮೀಕಿ ಸಮುದಾಯವನ್ನು ಎಲ್ಲಾ ಪಕ್ಷಗಳು ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂದು ನಗರದಲ್ಲಿ ವಾಲ್ಮೀಕಿ ಶ್ರೀ ಆಕ್ರೋಶ ಹೊರ ಹಾಕಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ, ಮೀಸಲಾತಿ ಕುರಿತು ಇದುವರೆಗೂ ಸರ್ಕಾರ ವಿಚಾರ ಮಾಡಿಲ್ಲ, ಮುಂಬರುವ ಫೆಬ್ರವರಿ 8, 9 ರಂದು ವಾಲ್ಮೀಕಿ ಜಾತ್ರೆಯಿದೆ, ಅಂದು ಸಿಎಂ ಅವರು ಮೀಸಲಾತಿ ಘೋಷಣೆ ಮಾಡಬೇಕು, ಇಲ್ಲವಾದಲ್ಲಿ ಸಿಎಂ ಅವರು ಮನೆಯಲ್ಲಿದ್ದರೆ ಮನೆಗೆ ನುಗ್ತೀವಿ, ವಿಧಾನಸೌಧದಲ್ಲಿದ್ರೆ ಅಲ್ಲಿಗೆ ನುಗ್ತೀವಿ ಎಂದು ಸ್ವಾಮೀಜಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಅಸೆಂಬ್ಲಿ ಹಾಗೂ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದವರು ರಾಮುಲು ಅವರನ್ನು ಡಿಸಿಎಂ ಮಾಡ್ತೀವಿ ಎಂದಿದ್ದರು, ಆದ್ರೆ ಇನ್ನೂ ಕೊಟ್ಟಿಲ್ಲ, ಈ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ಕೊಡಿ ಎಂದು ಒತ್ತಾಯ ಮಾಡ್ತೀವಿ ಎಂದು ಅವರು ಹೇಳಿದ್ರು. ಜೊತೆಗೆ ಸಮುದಾಯದ ಯಾವ ನಾಯಕನಿಗಾದರೂ ಸರಿ ಡಿಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ರು.