ಗದಗ : ಜಿಲ್ಲೆಯಲ್ಲಿ ಮತ್ತೆ ಯೂರಿಯಾ ಗೊಬ್ಬರದ ಅಭಾವ ಉದ್ಭವಿಸಿದೆ. ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಯೂರಿಯಾ ಗೊಬ್ಬರ ಪಡೆಯಲು ರೈತರು ಸರತಿ ಸಾಲಿನಲ್ಲಿ ನಿಲ್ಲುವಂತ ಸ್ಥಿತಿ ನಿರ್ಮಾಣವಾಗಿದೆ.
ಗದಗದಲ್ಲಿ ಮತ್ತೆ ಯೂರಿಯಾ ಅಭಾವ: ಸಮರ್ಪಕ ಗೊಬ್ಬರ ವಿತರಿಸುವಂತೆ ರೈತರ ಒತ್ತಾಯ - ಗದಗ ಸುದ್ದಿ
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೂರಿಯಾ ಗೊಬ್ಬರವನ್ನು ಖರೀದಿ ಮಾಡುತ್ತಿದ್ದಾರೆ. ಆದರೆ ಯೂರಿಯಾ ಗೊಬ್ಬರ ಸಮರ್ಪಕವಾಗಿ ಸಿಗದೆ ರೈತರು ಗೊಬ್ಬರಕ್ಕಾಗಿ ಪರದಾಡು ಸ್ಥಿತಿ ನಿರ್ಮಾಣವಾಗಿದೆ.
ಸಮರ್ಪಕ ಗೊಬ್ಬರ ವಿತರಿಸುವಂತೆ ರೈತರ ಒತ್ತಾಯ
ಮಳೆ ಚೆನ್ನಾಗಿ ಆಗಿರೋದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೂರಿಯಾ ಗೊಬ್ಬರವನ್ನು ಖರೀದಿ ಮಾಡುತ್ತಿದ್ದಾರೆ. ಆದರೆ ಯೂರಿಯಾ ಗೊಬ್ಬರ ಸಮರ್ಪಕವಾಗಿ ಸಿಗದೆ ರೈತರು ಗೊಬ್ಬರಕ್ಕಾಗಿ ಪರದಾಡು ಸ್ಥಿತಿ ನಿರ್ಮಾಣವಾಗಿದೆ.
ಮುಂಡರಗಿ ತಾಲೂಕಿನ ಹಲವು ಗ್ರಾಮದ ರೈತರು ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಂತರು ಸಹ ಗೊಬ್ಬರ ಸಿಗುತ್ತಿಲ್ಲಾ. ಅದರಲ್ಲೂ ಓರ್ವ ರೈತನಿಗೆ ಎರಡು ಚೀಲ ಮಾತ್ರ ಯೂರಿಯಾ ಗೊಬ್ಬರ ನೀಡಲಾಗುತ್ತಿದೆ. ಹಾಗಾಗಿ ಸಮರ್ಪಕವಾಗಿ ಯೂರಿಯಾ ಗೊಬ್ಬರವನ್ನು ವಿತರಣೆ ಮಾಡುವಂತೆ ರೈತರು ಒತ್ತಾಯ ಮಾಡಿದ್ದಾರೆ.