ಕರ್ನಾಟಕ

karnataka

ಹೊಳೆ ಆಲೂರಲ್ಲಿ ಅನಾಮಧೇಯ ವ್ಯಕ್ತಿಗಳಿಂದ ದಿನಸಿ ಕಿಟ್ ವಿತರಣೆ: ಅದನ್ನು ಮುಟ್ಟಲು ಜನ ಹಿಂಜರಿಯುತ್ತಿರೋದೇಕೆ?

By

Published : Apr 17, 2020, 12:21 PM IST

Updated : Apr 17, 2020, 1:43 PM IST

ಕೊರೊನಾ ರಾಜ್ಯದ ಜನರನ್ನು ಭೀತಿಯಲ್ಲಿ ಬದುಕುವಂತೆ ಮಾಡಿದೆ. ಈ ನಡುವೆ ಗದಗ ಜಿಲ್ಲೆಯ ಹೊಳೆಆಲೂರು ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಗಳಿಬ್ಬರು ದಿನಬಳಕೆ ವಸ್ತುಗಳ ಕಿಟ್​ ವಿತರಿಸಿದ್ದಾರೆ. ಅವರ ಮೇಲೆ ಸಂಶಯ ಉಂಟಾದ ಹಿನ್ನೆಲೆ ಅಲ್ಲಿನ ಜನರು ದಿನಸಿಗಳನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ.

unknown-person-distribute-daily-essential-kit-in-gadag-holealuru
ಗದಗ ಕಿಟ್​ ವಿತರಣೆ

ಗದಗ: ಕೊರೊನಾ ಭಯದಿಂದ ಕಂಗಾಲಾಗಿರುವ ಜನಕ್ಕೆ ರಾತ್ರೋರಾತ್ರಿ ಅನಾಮಧೇಯ ವ್ಯಕ್ತಿಗಳು ದಿನಸಿ ವಸ್ತುಗಳ ಕಿಟ್ ವಿತರಿಸಿದ್ದಾರೆ. ಆದ್ರೆ ದಾನವಾಗಿ ಕೊಟ್ಟಿರುವ ದಿನಸಿ ವಸ್ತುಗಳ ಕಿಟ್​ಗಳನ್ನು ಮುಟ್ಟಲು ಅಲ್ಲಿನ ನಿವಾಸಿಗಳು ಭಯ ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ, ಅನಾಮಧೇಯ ವ್ಯಕ್ತಿಗಳಿಬ್ಬರು ಬಂದು ಕಿಟ್ ವಿತರಣೆ ಮಾಡಿದ್ದಾನೆ. ನಾವು ಯಾರೂ ಅವರಿಗೆ ಏನನ್ನೂ ಕೇಳದಿದ್ರೂ ಮನೆ ಮನೆಗೆ ದಿನಸಿ ಕಿಟ್ ವಿತರಿಸಿ ಹೋಗಿದ್ದಾರೆ. ಇಳಿ ವಯಸ್ಸಿನವರಿಗೆ ಮಾತ್ರ ಅವಸರದಲ್ಲೇ ಕಿಟ್ ವಿತರಿಸಿ ಹೋದ್ರು. ಆದ್ರೆ ಅವರು ಯಾರು ಅಂತ ನಮಗೆ ತಿಳಿಯುತ್ತಿಲ್ಲ ಎಂದು ಜನರು ಹೇಳ್ತಿದ್ದಾರೆ‌.

ಹೊಳೆ ಆಲೂರಲ್ಲಿ ಅನಾಮಧೇಯ ವ್ಯಕ್ತಿಗಳಿಂದ ದಿನಸಿ ಕಿಟ್ ವಿತರಣೆ

‌ಜಿಲ್ಲಾಡಳಿತ ಅಥವಾ ತಾಲೂಕಿನ ಆಡಳಿತ ಅಧಿಕಾರಿಗಳಿಂದ ಕಿಟ್ ವಿತರಿಸಲು ಅನುಮತಿ ಪಡೆಯಬೇಕಿತ್ತು ಅಂತಿದ್ದಾರೆ. ಇಬ್ಬರು ಅನಾಮಧೇಯ ವ್ಯಕ್ತಿಗಳು ಇದ್ದರು ಅವಸರ ಅವಸರವಾಗಿ ಕಿಟ್ ನೀಡಿ ಹೋದ್ರು ಅಂತ ಜನ ಹೇಳ್ತಿದ್ದಾರೆ‌. ‌ಹೀಗಾಗಿ ಗ್ರಾಮದಲ್ಲಿ ಭಯ ಆತಂಕ ಮೂಡಿದೆ.

ಸದ್ಯ ಬಿಜೆಪಿ ಜಿಲ್ಲಾ ಪಂಚಾಯತ್​ ಸದಸ್ಯ ಶಿವಕುಮಾರ ಎಂಬುವರು ಜನರ ಮನೆಗೆ ಹೋಗಿ ವಿಜಾರಣೆ ನಡೆಸಿ ಎಸ್​ಪಿ ಯತೀಶ್​ ಎನ್​. ಅವರಿಗೆ ಮಾಹಿತಿ ನೀಡಿದ್ದರು. ಬಳಿಕ0 ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಒಟ್ಟಿನಲ್ಲಿ ಯಾವ ಉದ್ದೇಶಕ್ಕಾಗಿ ಕಿಟ್​ ವಿತರಿಸಿದರು ಎಂಬುದು ತಿಳಿದುಬಂದಿಲ್ಲ.

Last Updated : Apr 17, 2020, 1:43 PM IST

ABOUT THE AUTHOR

...view details