ಕರ್ನಾಟಕ

karnataka

ETV Bharat / state

ಉತ್ತರನ ಪೌರುಷ ಥರ, ಉಗ್ರಪ್ಪನ ಪೌರುಷ ಮಾಧ್ಯಮದ ಮುಂದೆ: ಸಿ.ಟಿ ರವಿ - ಉಗ್ರಪ್ಪಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ

ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೆ ಉಗ್ರಪ್ಪನ ಪೌರುಷ ಮಾಧ್ಯಮದ ಮುಂದೆ ಅಂತ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ, ಉಗ್ರಪ್ಪ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಉಗ್ರಪ್ಪಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ

By

Published : Nov 4, 2019, 8:37 PM IST

ಗದಗ: ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೆ ಉಗ್ರಪ್ಪನ ಪೌರುಷ ಮಾಧ್ಯಮದ ಮುಂದೆ ಅಂತ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಉಗ್ರಪ್ಪ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಉಗ್ರಪ್ಪಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ

ಉಗ್ರಪ್ಪನವರು ತಮ್ಮ ಸಾಮರ್ಥ್ಯ ಏನು ಅನ್ನೋದನ್ನ ಆಗಾಗ ಮಾಧ್ಯಮಗಳೆದುರು ತೋರಿಸುತ್ತಿರುತ್ತಾರೆ. ಆದ್ರೆ ನಿಮ್ಮ ಪೌರುಷವನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಬೇಕಾಗಿತ್ತು. ಆಕಾಶ ಭೂಮಿ‌ ಒಂದಾಗೋ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ನಡೆದುಕೊಂಡ್ರು. ಆದರೆ ಇದಕ್ಕೆಲ್ಲ ಫಲಿತಾಂಶ ಉತ್ತರ ನೀಡಿತು ಅಂತ ಹಿಂದಿನ ಸಮ್ಮಿಶ್ರ ಸರ್ಕಾರಕ್ಕೆ ಟಾಂಗ್ ನೀಡಿದರು.

ಇನ್ನು ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ ರವಿ, ನ್ಯಾಯಾಲಯದ ಆದೇಶದ ಮೇಲೆ ಉಪಚುನಾವಣೆ ನಿರ್ಧರಿಸಲಾಗುತ್ತದೆ. ನ್ಯಾಯಾಲಯದ ಆದೇಶದ ನಂತರ ಚುನಾವಣೆ ಬಗ್ಗೆ ವರಿಷ್ಠರು ನಿರ್ಧಾರ ಮಾಡ್ತಾರೆ ಅಂತ ಹೇಳಿದ್ರು. ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಲಿಕ್ಕೆ ಕಾಂಗ್ರೆಸ್ ಪಕ್ಷದವರೇ ವಿರೋಧ ಮಾಡಿದ್ರು. ನಮ್ಮಲ್ಲಿ ಯಡಿಯೂರಪ್ಪನವರ ನಾಯಕತ್ವಕ್ಕೆ ಯಾವುದೇ ವಿರೋಧಗಳಿಲ್ಲ ಅಂತ ಬಿಜೆಪಿ‌ ಪಕ್ಷದಲ್ಲಿ ಯಾವುದೇ ಅಪಸ್ವರ ಇಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ರು.

ಯಡಿಯೂರಪ್ಪನವರು ಸಿಎಂ ಆಗಿ ಹೆಚ್ಚು ದಿನ‌ ಇರಲ್ಲ ಎನ್ನುವ ದಿನೇಶ್ ಗುಂಡುರಾವ್ ಹೇಳಿಕೆಗೆ ಖಾರವಾಗಿಯೇ ತಿರುಗೇಟು ನೀಡಿದ ಸಿ.ಟಿ ರವಿ, ದಿನೇಶ್ ಗುಂಡೂರಾವ್ ಅವರ ಕುರ್ಚಿಗೇ ಟೈಂ ಬಾಂಬ್ ಫಿಕ್ಸ್ ಆಗಿದೆ. ಅದನ್ನು ಇಟ್ಟಿರುವವರು ಕಾಂಗ್ರೆಸ್​ನವರೇ. ಹೀಗಿದ್ದಾಗ ಅವರ ಬಗ್ಗೆ ನಾವೇನು ಹೇಳೋದು. ಪಿತೂರಿ ರಾಜಕಾರಣ ಮಾಡೋದು ಕಾಂಗ್ರೆಸ್ ಜಾಯಮಾನವಾಗಿದ್ದು, ವಿರೇಂದ್ರ ಪಾಟೀಲ್​ರವರನ್ನು ಯಾವ ರೀತಿ ಕೆಳಗಿಳಿಸಿದರು, ಬಂಗಾರಪ್ಪನವರಿಗೆ ಏನು ಮಾಡಿದ್ರು?, ಎನ್ನೋದೇ ಇದಕ್ಕೆ‌ ಉದಾಹರಣೆ ಅಂತ ಹೇಳಿದ್ರು.

ಇನ್ನು ನಳೀನ್ ಕುಮಾರ್​ ಕಟೀಲ್ ಅವರೇ ಯಡಿಯೂರಪ್ಪನವರ ಆಡಿಯೋ ಲೀಕ್ ಮಾಡಿಸಿದ್ದಾರೆ ಎನ್ನೋ ದಿನೇಶ್ ಗುಂಡೂರಾವ್ ಆರೋಪ ಕುರಿತು, ದಿನೇಶ್ ಗುಂಡುರಾವ್ ಸಿದ್ದರಾಮಯ್ಯ ನೇಮಕ ಮಾಡಿರೋ ಸಿಐಡಿ ಇರಬೇಕು. ಆದರೆ ಆ ಸಿಐಡಿ ಬೋಗಸ್ ರಿಪೋರ್ಟ್ ಕೊಡೋಕೆ ನೇಮಕವಾಗಿದ್ದಾರೆ ಅ‌ನ್ನೋದಾದ್ರೆ, ಅಂತಹ ಹೇಳಿಕೆಯನ್ನ ಜನ್ರೇ ತೀರ್ಮಾನ ಮಾಡ್ತಾರೆ ಅಂತ ಗುಂಡೂರಾವ್ ವಿರುದ್ಧ ಗುಡುಗಿದ್ರು.

ABOUT THE AUTHOR

...view details