ಗದಗ:ಉತ್ತರ ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಇಂದು ಗದಗ್‌ದಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರವಾಹ ಬಂದಿದೆ. ಪರಿಣಾಮ ಪ್ರವಾಹದ ಸೆಳೆತಕ್ಕೆ ಸಿಕ್ಕಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.
ಗಂಗಾ ಪೂಜೆಗೆಂದು ನೀರು ತರಲು ಹೋದ ಯುವಕರಿಬ್ಬರು ಗಂಗೆಯ ಪಾಲಾಗಿಬಿಟ್ಟರು.. - ಅಗ್ನಿಶಾಮಕ ದಳದ ಸಿಬ್ಬಂದಿ
ಉತ್ತರ ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಇಂದು ಸುರಿದ ಧಾರಾಕಾರ ಮಳೆಗೆ ಯುವಕರಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
two-peoples-death-at-gadag
ಕಳಸಪ್ಪ (30) ಹಾಗೂ ಈರಣ್ಣ (15) ಕೊಚ್ಚಿ ಹೋದ ಯುವಕರು. ರೋಣ ತಾಲೂಕಿನ ಮಾಳವಾಡದ ಮಲಪ್ರಭ ನದಿ ಹಾಗೂ ಬೆಣ್ಣೆಹಳ್ಳದ ಸಂಗಮ ಸ್ಥಳದಲ್ಲಿ ಈ ಘಟನೆ ನಡೆದಿದೆ. ಗಂಗಾಪೂಜೆಗೆ ನೀರು ತರಲು ತೆರಳಿದಾಗ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಇಬ್ಬರು ಯುವಕರು ನರಗುಂದ ತಾಲೂಕಿನ ಹದ್ಲಿ ಗ್ರಾಮದವರು ಎಂದು ತಿಳಿದು ಬಂದಿದೆ. ರೋಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೊಚ್ಚಿಹೋಗಿರುವ ಯುವಕರ ಶೋಧ ಕಾರ್ಯ ಮುಂದುವರಿದಿದೆ.
Last Updated : Oct 26, 2019, 11:58 PM IST