ಗದಗ:ಸಿಡಿಲು ಬಡೆದು ಮಾವ-ಅಳಿಯ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಳಿ ನಡೆದಿದೆ.
ಗದಗ: ಸಿಡಿಲು ಬಡಿದು ಮಾವ-ಅಳಿಯ ಸಾವು - Siḍilu Thunderbolt
ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಳಿ ನಡೆದಿದೆ.
ಸಿಡಿಲು ಬಡಿದು ಸಾವು
ವೆಂಕ್ಲಪ್ಪ ಪಾಗದ (30), ಕಿರಣ ಸಂಗಪ್ಪ ರುದ್ರಗೌಡ (7) ಮೃತ ದುರ್ದೈವಿಗಳು. ವೆಂಕ್ಲಪ್ಪ ಪಾಗದ ರೋಣ ತಾಲೂಕಿನ ಕೊತಬಾಳ ಗ್ರಾಮದ ನಿವಾಸಿ. ಕಿರಣ ಸಂಗಪ್ಪ ರುದ್ರಗೌಡ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ನಿವಾಸಿಯಾಗಿದ್ದಾರೆ.
ಮಾವ ವೆಂಕಪ್ಪ ಅಳಿಯ ಕಿರಣನನ್ನು ಕೊತಬಾಳ ಗ್ರಾಮಕ್ಕೆ ಕರೆದುಕೊಂಡು ಹೋಗುವಾಗ ರೋಣದಿಂದ ಎರಡು ಕಿ.ಮೀ. ಅಂತರದಲ್ಲಿ ಈ ದುರ್ಘಟನೆ ನಡೆದಿದೆ. ಈ ಸಂಬಂಧ ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : May 6, 2020, 8:49 PM IST