ಗದಗ:ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಲಾಂಗ್, ಕಬ್ಬಿಣ ರಾಡ್, ಕೋಲುಗಳಿಂದ ಹೊಡೆದಾಡಿಕೊಂಡಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಪೊಲೀಸ್ ಠಾಣೆ ಪಕ್ಕದಲ್ಲಿರುವ ಬಾರ್ನಲ್ಲಿ ಮದ್ಯ ಪ್ರೀಯರು ಹಾಗೂ ಬಾರ್ ಸಪ್ಲಾಯರ್ ನಡುವೆ ಈ ಘಟನೆ ನಡೆದಿದೆ. ಮದ್ಯ ವ್ಯಸನಿ ಗ್ರಾಹಕರು, ಪಾನ ಮತ್ತಿನಲ್ಲಿ ಟೆಬಲ್ ಬಡೆದಿದ್ದಾರೆ. ಆದರೂ ಸಪ್ಲಾಯರ್ಗಳು ಬೇಗನೆ ಬಾರದಕ್ಕೆ ಜೋರಾಗಿ ಕೂಗಾಡಿದ್ದಾರೆ. ಅಲ್ಲಿಗೆ ಬಂದ ಸಪ್ಲಾಯರ್ ಹಾಗೂ ಗ್ರಾಹಕನ ಮಧ್ಯೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಆವೇಶದಲ್ಲಿ ಮದ್ಯ ಪ್ರೀಯರು ಹಾಗೂ ಬಾರ್ ಸಪ್ಲಾಯರ್ ಕಬ್ಬಿಣದ ರಾಡ್, ಕೋಲು ಹಾಗೂ ಲಾಂಗ್ಗಳಿಂದ ಹೊಡೆದಾಡಿಕೊಳ್ಳಲು ಶುರು ಮಾಡಿದ್ದಾರೆ.