ಕರ್ನಾಟಕ

karnataka

ಗದಗ: ತ್ರಿಕೂಟೇಶ್ವರನ ದರ್ಶನಕ್ಕೆ ಭಕ್ತರಿಗೆ ಇಂದಿನಿಂದ ಅವಕಾಶ

By

Published : Jun 8, 2020, 1:24 PM IST

ಇಂದಿನಿಂದ ತ್ರಿಕೂಟೇಶ್ವರ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಭಕ್ತರರಿಗೆ ದೇವರ ದರ್ಶನ ಪಡೆಯಲು ಮತ್ತು ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ.

Gadag
ತ್ರಿಕೂಟೇಶ್ವರನ ದರ್ಶನಕ್ಕೆ ಅವಕಾಶ

ಗದಗ: ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಇಂದಿನಿಂದ ತ್ರಿಕೂಟೇಶ್ವರನ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇಂದು ಬೆಳಗ್ಗೆ 5 ಗಂಟೆಯಿಂದಲೇ ಅರ್ಚಕರು ದೇವಸ್ಥಾನವನ್ನು ಶುಭ್ರಗೊಳಿಸಿ, ಮೂರ್ತಿಗೆ ಮಡಿ ಮಾಡಿದ ನಂತರ ಬೆಳಗ್ಗೆ 6 ಗಂಟೆಯಿಂದ ಭಕ್ತರಿಗೆ ದೇವರ ದರ್ಶನ ಮತ್ತು ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಆದ್ರೆ ದೇವಸ್ಥಾನಕ್ಕೆ ಬರುವ ಭಕ್ತರು ಕಾಯಿ ಕರ್ಪೂರ ತರುವ ಹಾಗಿಲ್ಲ. ಊದಿನಕಡ್ಡಿ ಬೆಳಗುವ ಹಾಗಿಲ್ಲ ಎಂಬ ನಿಯಮವಿದೆ. ಹೀಗಾಗಿ ಭಕ್ತರು ಬರಿ ಕೈಯಿಂದ ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

ತ್ರಿಕೂಟೇಶ್ವರನ ದರ್ಶನಕ್ಕೆ ಇಂದಿನಿಂದ ಅವಕಾಶ

ಇಂದು ವಿಶೇಷವಾಗಿ ತ್ರಿಕೂಟೇಶ್ವರನಿಗೆ ರುದ್ರಾಭಿಷೇಕ ಮಾಡಲಾಗ್ತಿದೆ. ಗರ್ಭಗುಡಿಯೊಳಗೆ ದೇವರಿಗೆ ಪೂಜೆ, ಪುನಸ್ಕಾರ, ಅಭಿಷೇಕ ಏನೇ ಮಾಡಿದರೂ ಕೇವಲ ಇಬ್ಬರು ಅರ್ಚಕರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಹಿಂದೆ ಇಬ್ಬರಿಗಿಂತ ಹೆಚ್ಚು ಜನ ಅರ್ಚಕರು ಸೇರಿಕೊಂಡು ರುದ್ರಾಭಿಷೇಕ ಮಾಡುತ್ತಿದ್ದರು. ಆದ್ರೆ ಈಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಇಬ್ಬರಿಂದ ಮಾತ್ರ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.

ಇಲ್ಲಿಗೆ ಬರುವಂತ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಹಾಕಿಕೊಂಡವರಿಗೆ ಮಾತ್ರ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ABOUT THE AUTHOR

...view details