ಗದಗ:ಮುಂಬೈನಿಂದ ನಗರಕ್ಕೆ ರೈಲಿನಲ್ಲಿ 107 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಿಗೆಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಕ್ರೀನಿಂಗ್ ಮಾಡಿ ನಂತರ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿದರು.
ಮುಂಬೈನಿಂದ ಗದಗಕ್ಕೆ ಬಂದ ರೈಲು: ಪತ್ನಿ-ಮಕ್ಕಳನ್ನು ಕಂಡು ಭಾವುಕನಾದ ವ್ಯಕ್ತಿ! - ಗದಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ
ಲಾಕ್ಡೌನ್ ಆದಾಗಿನಿಂದ ವ್ಯಕ್ತಿಯೊಬ್ಬ ಹೆಂಡತಿ-ಮಕ್ಕಳನ್ನು ಕಾಣದೇ ಸಂಕಟ ಅನುಭವಿಸಿದ್ದ. ಈಗ ಮುಂಬೈನಿಂದ ರೈಲಿನಲ್ಲಿ ಆಗಮಿಸಿದ ಪತ್ನಿ ಹಾಗೂ ಮಕ್ಕಳನ್ನು ಕಂಡ ವ್ಯಕ್ತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.
![ಮುಂಬೈನಿಂದ ಗದಗಕ್ಕೆ ಬಂದ ರೈಲು: ಪತ್ನಿ-ಮಕ್ಕಳನ್ನು ಕಂಡು ಭಾವುಕನಾದ ವ್ಯಕ್ತಿ! dsd](https://etvbharatimages.akamaized.net/etvbharat/prod-images/768-512-7458876-thumbnail-3x2-vish.jpg)
ಪತ್ನಿ,ಮಕ್ಕಳನ್ನು ಕಂಡು ಪತಿ ಭಾವುಕ!
5 ಬಸ್ಗಳ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲಾಯಿತು. ಗದಗ ಜಿಲ್ಲೆ, ಹುಬ್ಬಳ್ಳಿ ಸೇರಿ ವಿವಿಧ ಜಿಲ್ಲೆಗಳ ಜನ ಈ ರೈಲಿನಲ್ಲಿ ಆಗಮಿಸಿದ್ದರು. ಅವರಲ್ಲಿ ಸ್ವಂತ ವಾಹನ ಇದ್ದವರನ್ನು ಆಯಾ ಜಿಲ್ಲೆಗೆ ಜಿಲ್ಲಾಡಳಿತ ಕಳುಹಿಸಿಕೊಟ್ಟಿದೆ.
ಪತ್ನಿ-ಮಕ್ಕಳನ್ನು ಕಂಡು ವ್ಯಕ್ತಿ ಭಾವುಕ!
ಇದೇ ಲಾಕ್ಡೌನ್ಗೆ ಸಿಲುಕಿ ಮುಂಬೈನಿಂದ ಹುಬ್ಬಳ್ಳಿಗೆ ಬರಲು ಪರದಾಡಿದ್ದ ಕುಟುಂಬವೊಂದು ನಗರಕ್ಕೆ ಬಂದಿದೆ. ಮುಂಬೈನಿಂದ ಬಂದ ಪತ್ನಿ ಹಾಗೂ ಮಕ್ಕಳನ್ನು ಕಂಡ ವ್ಯಕ್ತಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.