ಗದಗ :ತಪ್ಪಿಗೆ ದಂಡ ಹಾಕೋ ಟ್ರಾಫಿಕ್ ಪೊಲೀಸರೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ತ್ರಿಬಲ್ ರೈಡಿಂಗ್ ಹೋದ ಘಟನೆ ಗದಗ ನಗರದ ಭೂಮರೆಡ್ಡಿ ವೃತ್ತದಲ್ಲಿ ನಡೆದಿದೆ.
ಟ್ರಾಫಿಕ್ ಪೊಲೀಸರಿಂದಲೇ ರೂಲ್ಸ್ ಬ್ರೇಕ್... ತ್ರಿಬಲ್ ರೈಡಿಂಗ್ ವಿಡಿಯೋದ್ದೇ ಫುಲ್ ಸುದ್ದಿ! - ಟ್ರಾಫಿಕ್ ರೂಲ್ಸ್ ಬ್ರೇಕ್
ತ್ರಿಬಲ್ ರೈಡಿಂಗ್ ಹೋಗೋ ಬೈಕ್ ಸವಾರರನ್ನು ತಡೆದು ಅಪಘಾತದ ಕುರಿತು ತಿಳಿ ಹೇಳಬೇಕಾದ ಟ್ರಾಫಿಕ್ ಪೊಲೀಸ್ ಸ್ವತಃ ತಾನೇ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಹೊಗೋ ಮೂಲಕ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ಗದಗ ನಗರದ ಭೂಮರೆಡ್ಡಿ ವೃತ್ತದಲ್ಲಿ ನಡೆದಿದೆ. ಇದೀಗ, ತ್ರಿಬಲ್ ರೈಡಿಂಗ್ ಮಾಡಿದ ಪೊಲೀಸಪ್ಪನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟ್ರಾಫಿಕ್ ಪೊಲೀಸರಿಂದಲೇ ಟ್ರಾಫಿಕ್ ರೂಲ್ಸ್ ಬ್ರೇಕ್
ತ್ರಿಬಲ್ ರೈಡಿಂಗ್ ಹೋಗೋ ಬೈಕ್ ಸವಾರರನ್ನು ತಡೆ ಹಿಡಿದು ಅಪಘಾತದ ಕುರಿತು ತಿಳಿ ಹೇಳಬೇಕಾದ ಟ್ರಾಫಿಕ್ ಪೊಲೀಸ್ ಸ್ವತಃ ತಾನೇ ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಹೊಗೋ ಮೂಲಕ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿದ್ದಾನೆ.
ಹಾಗಾಗಿ ಇತ್ತೀಚೆಗೆ ಟ್ರಾಫಿಕ್ ರೂಲ್ಸ್ಗಳಿಗೆ ದಂಡ ಕಟ್ಟಿ ಸುಸ್ತಾಗಿರೋ ಸಾರ್ವಜನಿಕರು, ಪೊಲೀಸರಿಗೆ ಒಂದು ರೂಲ್ಸ್? ಸಾರ್ವಜನಿಕರಿಗೆ ಒಂದು ರೂಲ್ಸೇನು? ಅಂತ ಪ್ರಶ್ನೆ ಮಾಡ್ತಿದಾರೆ. ಸದ್ಯ ತ್ರಿಬಲ್ ರೈಡಿಂಗ್ ಮಾಡಿದ ಪೊಲೀಸಪ್ಪನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.