ಗದಗ:ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗುಂಜಳ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.
ಲಕ್ಷ್ಮೇಶ್ವರ ಪಟ್ಟಣದ ನಿವಾಸಿಗಳಾದ ಸರೋಜವ್ವ ಹಿತ್ತಲಮನಿ (40) ಹಾಗೂ ಸೋಮವ್ವಾ ಅಡುಗೆಮನೆ (48) ಮೃತ ಮಹಿಳೆಯರು. ದುರಗವ್ವ ದೂಳಮ್ಮನವರ, ಬಸಮ್ಮ ಗಡದವರ, ಗಂಗವ್ವ ಹೊಸಮನಿ, ಬಸವ್ವ ಸಂದಿಮನಿ, ಶೋಭಕ್ಕ ದೂಳಮ್ಮನವರ, ಸುಂದರವ್ವ ಗಡದವರ ಹಾಗೂ ಯಲ್ಲವ್ವ ಬೂದಿಹಾಳ ಗಾಯಗೊಂಡವರಾಗಿದ್ದಾರೆ.