ಕರ್ನಾಟಕ

karnataka

ETV Bharat / state

ನಾಳೆ ನವೀಕೃತ ಗದಗ ಬಸ್ ನಿಲ್ದಾಣ ಲೋಕಾರ್ಪಣೆ - ಗದಗ ಬಸ್ ನಿಲ್ದಾಣ

ನವೀಕೃತ ಬಸ್ ನಿಲ್ದಾಣಕ್ಕೆ ಸರ್ಕಾರ ಈಗಾಗಲೇ ಪುಟ್ಟರಾಜ ಗವಾಯಿ ಬಸ್ ನಿಲ್ದಾಣ ಎಂದು ಹೆಸರು ಇಟ್ಟಿದ್ದು, ನಾಳೆ ಸಂಜೆ 4 ಗಂಟೆಗೆ ಲೋಕಾರ್ಪಣೆಯಾಗಲಿದೆ. ಡಿಸಿಎಂ ಲಕ್ಮಣ ಸವದಿ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.

tomorrow Renewed Gadag Bus Stand inauguration program
ನಾಳೆ ನವೀಕೃತ ಗದಗ ಬಸ್ ನಿಲ್ದಾಣ ಲೋಕಾರ್ಪಣೆ

By

Published : Jan 23, 2021, 9:45 AM IST

ಗದಗ: ನಗರದ ನವೀಕೃತ ಬಸ್ ನಿಲ್ದಾಣದ ಉದ್ಘಾಟನೆಗೆ ಕೊನೆಗೂ ಕಾಲ‌ ಕೂಡಿ ಬಂದಿದ್ದು, ನಾಳೆ ಬಸ್​ ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ.

ನವೀಕೃತ ಬಸ್ ನಿಲ್ದಾಣಕ್ಕೆ ಸರ್ಕಾರ ಈಗಾಗಲೇ ಪುಟ್ಟರಾಜ ಗವಾಯಿ ಬಸ್ ನಿಲ್ದಾಣ ಎಂದು ಹೆಸರಿಟ್ಟಿದ್ದು, ನಾಳೆ ಸಂಜೆ 4 ಗಂಟೆಗೆ ಲೋಕಾರ್ಪಣೆಯಾಗಲಿದೆ. ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಮಣ್​ ಸವದಿ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಗದಗ ಶಾಸಕ ಹೆಚ್.ಕೆ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ:ರಾಜಕೀಯ ಕೆಸರೆರಚಾಟದಲ್ಲಿ ಗದಗ​ ಬಸ್ ನಿಲ್ದಾಣ ಅನಾಥ: ಸಿಗದ ಉದ್ಘಾಟನಾ ಭಾಗ್ಯ..!

ಜಿಲ್ಲೆಯ ಶಾಸಕರು ಸೇರಿದಂತೆ ಇತರೆ ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಕೆಎಸ್‌ಆರ್‌ಟಿಸಿ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ ತಿಳಿಸಿದ್ದಾರೆ.

ABOUT THE AUTHOR

...view details