ಗದಗ:ವರ್ಷದ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮಾಧಿಯಿಂದ ಹೊರತೆಗೆದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೆಣಸಿನಕಾಯಿ ವ್ಯಾಪಾರಿ ಚನ್ನವೀರಪ್ಪ ವೀರಪ್ಪ ಶೆಟ್ಟರ್ (40) ಎಂಬುವವರು 9-6-2018 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು. ಬಳಿಕ ಆತನ ಸಾವಿನ ಬಗ್ಗೆ ಸಂಶಯಗೊಂಡ ಪತ್ನಿ ಸುಮಾ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ, ಶವ ಪರೀಕ್ಷೆಗಾಗಿ ಜಕ್ಕಲಿ ಗ್ರಾಮದಲ್ಲಿ ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರಗಳನ್ನು ಬಳಸಿ, ಶವ ಹೊರ ತೆಗೆಯುವುದಕ್ಕೆ ಮುಂದಾದ್ರು.