ಗದಗ:ಕ್ಷುಲ್ಲಕ ಕಾರಣಕ್ಕೆ ಮೂವರಿಗೆ ಚಾಕು ಇರಿದ ಘಟನೆ ನಗರದ ಕಿಲ್ಲಾ ಓಣಿಯಲ್ಲಿ ತಡರಾತ್ರಿ ನಡೆದಿದೆ. ಆರು ಜನರು ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ವಸಂತ ಬಾಕಳೆ, ಗೋಪಾಲ ಖೋಡೆ ಹಾಗೂ ಮಾಧುಸಾ ಬದಿ ಎಂಬುವರು ಚಾಕು ಇರಿತಕ್ಕೊಳಗಾದವರು.
ಕೆಲ ಜನರ ನಡುವೆ ಗಲಾಟೆ ನಡೆಯುತ್ತಿತ್ತು, ನಾವು ಬುದ್ಧಿ ಹೇಳಲು ಹೋದಾಗ ನಮ್ಮ ಮೇಲೆಯೇ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ರಂಗನವಾಡಿಯ ಶಿವಾನಂದ ಅಲಿಯಾಸ್ ಶಿವು, ಸಾಧಿಕ್ ಅಕಬರಸಾಬ್, ಯೂನಸ್ ಮೋದಿನಸಾಬ್, ಅಲ್ವಿನ್ ಗ್ಯಾಬ್ರೀಲ್ ಹಾಗೂ ಇನ್ನಿಬ್ಬರು ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.