ಗದಗ:ಎರಡುದ್ವಿಚಕ್ರ ವಾಹನ ಹಾಗೂ ಕಾರೊಂದರ ಮಧ್ಯೆ ಅಪಘಾತ ಸಂಭವಿಸಿ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ಗದಗದಲ್ಲಿ ನಡೆದಿದೆ. ತಾಲೂಕಿನ ಅಡವಿಸೋಮಾಪೂರ ಬಳಿಯ ಮುಂಡರಗಿ ರಸ್ತೆಯ ಮಲ್ಲಿಕಾರ್ಜುನ ಮಠದ ಬಳಿ ಈ ದುರ್ಘಟನೆ ಸಂಭವಿಸಿದೆ.
ಗದಗ: ಭೀಕರ ರಸ್ತೆ ಅಪಘಾತ.. ಮೂವರು ದಾರುಣ ಸಾವು - car bike accident
ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂರು ಜನ ಸಾವನ್ನಪ್ಪಿದ್ದಾರೆ.
ಗದಗ: ಭೀಕರ ರಸ್ತೆ ಅಪಘಾತ ಮೂವರ ದಾರುಣ ಸಾವು
ಸಿಂಗಟರಾಯನಕೇರಿ ತಾಂಡಾದ ಶಿವಪ್ಪ ನಾಯಕ್ (50), ಛಬ್ಬಿ ತಾಂಡಾದ ಶಿವಾನಂದ ಲಮಾಣಿ (33), ಹಾಗೂ ಡೋಣಿ ತಾಂಡಾದ ಕೃಷ್ಣಪ್ಪ ಚೌಹಾಣ (31) ಸಾವನ್ನಪ್ಪಿದ್ದಾರೆ. ಅಪಘಾತ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಆಟ ಆಡುವಾಗ ಆಯತಪ್ಪಿ ಕೆರೆಯಲ್ಲಿ ಬಿದ್ದು ಮಗು ಸಾವು